ಮುಂಬೈ: ‘ಮಾಸ್ಟರ್ ಬ್ಲಾಸ್ಟರ್’ ಸಚಿನ ತೆಂಡೂಲ್ಕರ್ ಜೀವನಾಧರಿತ ಸಿನಿಮಾ ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಶುಕ್ರವಾರ ಬಿಡುಗಡೆಯಾಗಿದ್ದು ಮೊದಲ ದಿನವೇ ₹8.6 ಕೋಟಿ ಹಣ ಗಳಿಸಿದೆ ಎಂದು ಸಿನಿಮಾದ ಹಂಚಿಕೆದಾರ ಅನಿಲ್ ತಡನಿ ತಿಳಿಸಿದ್ದಾರೆ.
ಈ ಸಿನಿಮಾ ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 2,450 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ಒಂದೇ ಪರದೆ ಇರುವ ಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.
ರವಿ ಭಗ್ಚಂದನಿ ನಿರ್ಮಾಣದ ಈ ಚಿತ್ರವನ್ನು ಜೇಮ್ಸ್ ಇರ್ಸ್ಕಿನ್ ನಿರ್ದೇಶಿಸಿದ್ದಾರೆ.