ADVERTISEMENT

ಸಚಿವರಿಗಾಗಿ ಪ್ರಯಾಣಿಕರನ್ನು ಕೆಳಗಿಳಿಸಿದ ಏರ್‌ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 9:27 IST
Last Updated 2 ಜುಲೈ 2015, 9:27 IST

ನವದೆಹಲಿ (ಐಎಎನ್‌ಎಸ್‌): ಕೇಂದ್ರ ಸಚಿವ ಕಿರಣ್‌ ರಿಜಿಜು ಅವರು ಪ್ರಯಾಣಿಸಲು ಅನುವುಮಾಡಿ ಕೊಡುವ ಸಲುವಾಗಿ ಏರ್‌ಇಂಡಿಯಾ ಮೂವರು ಪ್ರಯಾಣಿಕರನ್ನು ಕೆಳಗಿಳಿಸಿರುವ ಪ್ರಕರಣ ಇದೀಗ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ.

ಕಳೆದ ಜೂನ್‌ 24ರಂದು ಕಿರಣ್‌ ರಿಜಿಜು ಅವರು ಲೇ ನಿಂದ ದೆಹಲಿಗೆ  ತೆರಳಬೇಕಿತ್ತು. ಸಚಿವರ ಪ್ರಯಾಣಕ್ಕೆ ಅನುವು ಮಾಡಿಕೊಡುವ ಸಲುವಾಗಿ ಒಂದು ಮಗು ಸೇರಿದಂತೆ ಮೂವರು ಪ್ರಯಾಣಿಕರನ್ನು ಕೆಳಗಿಳಿಸಿರುವ ಏರ್‌ ಇಂಡಿಯಾದ ಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು ಏರ್‌ಇಂಡಿಯಾ ಅಧಿಕಾರಿಗಳು ಮೂವರು ಪ್ರಯಾಣಿಕರನ್ನು ಕೆಳಗಿಳಿಸಿ ನನಗೆ ಅವಕಾಶ ಕಲ್ಪಿಸಿರುವುದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ನನಗೆ ಈ ವಿಷಯ ಗೊತ್ತಾಗಿದ್ದರೆ ನಾನು ಪ್ರಯಾಣಿಸುತ್ತಿರಲಿಲ್ಲ ಎಂದು ಕಿರಣ್‌ ರಿಜಿಜು ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಏರ್‌ ಇಂಡಿಯಾ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT