ನವದೆಹಲಿ (ಪಿಟಿಐ): ಸಚಿವರು, ಸಂಸದರು ಹಾಗೂ ಶಾಸಕರು ಚುನಾವಣೆಯಲ್ಲಿ ಅಭ್ಯರ್ಥಿಗಳ ಏಜೆಂಟ್ಗಳಾಗುವುದಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
ಇವರ ಜೊತೆಯಲ್ಲಿ ಭದ್ರತಾ ಸಿಬ್ಬಂದಿ ಇರುವುದರಿಂದ ಸ್ಪರ್ಧೆಯಲ್ಲಿರುವ ಇತರ ಅಭ್ಯರ್ಥಿಗಳಿಗೆ ಸಮಾನ ಮಟ್ಟದ ಅವಕಾಶ ನೀಡಿದಂತಾಗುವುದಿಲ್ಲ ಎಂದು ಆಯೋಗ ಹೇಳಿದೆ.
ಇದರ ಜೊತೆಯಲ್ಲೇ ಮೇಯರ್ಗಳು, ನಗರ ಪಾಲಿಕೆ, ಜಿಲ್ಲಾ ಪರಿಷತ್ಗಳ, ಪಂಚಾಯಿತಿ ಒಕ್ಕೂಟಗಳ ಅಧ್ಯಕ್ಷರು ಚುನಾವಣಾ, ಮತಗಟ್ಟೆ ಅಥವಾ ಮತ ಎಣಿಕೆ ಏಜೆಂಟ್ ಆಗುವುದನ್ನೂ ಆಯೋಗ ತಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.