ADVERTISEMENT

ಸಾಮ್ನಾ ಕಚೇರಿ ಮೇಲೆ ಕಲ್ಲು ತೂರಾಟ

ಪಿಟಿಐ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST

ಮುಂಬೈ: ಮರಾಠಾ ಸಮುದಾ ಯವು ನಡೆಸುತ್ತಿರುವ ‘ಮೌನ ಮೆರವಣಿಗೆ’ಯನ್ನು ಟೀಕಿಸುವ ವ್ಯಂಗ್ಯಚಿತ್ರ ಪ್ರಕಟಿಸಿದ ಆರೋಪದಲ್ಲಿ ನವಿ ಮುಂಬೈನಲ್ಲಿನ ಶಿವ ಸೇನಾದ ಮುಖವಾಣಿ ಪತ್ರಿಕೆ ‘ಸಾಮ್ನಾ’ದ ಕಚೇರಿ ಮೇಲೆ ಮಂಗಳವಾರ ದಾಳಿ ನಡೆದಿದೆ.

ಮರಾಠಾ ಸಾಮಾಜಿಕ ಸಂಘಟನೆ ‘ಸಂಭಾಜಿ ಬ್ರಿಗೇಡ್‌’ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಮಧ್ಯಾಹ್ನ 1.45ರ ಸುಮಾರಿಗೆ ಸನ್ಪಡಾದಲ್ಲಿರುವ ಪತ್ರಿಕಾ ಮುದ್ರಣ ಕಟ್ಟಡಕ್ಕೆ ವಾಹನವೊಂದರಲ್ಲಿ ಬಂದ ಮೂವರು ಯುವಕರು ಕಾವಲುಗಾರನನ್ನು ಕರೆದು ಪತ್ರವೊಂದನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಕಾವಲುಗಾರ ವಾಹನದ ಸಮೀಪ ಬರುತ್ತಿದ್ದಂತೆಯೇ ಕೆಳಗಿಳಿದು ಕಟ್ಟಡದತ್ತ ಓಡಿದ ಯುವಕರು ಅದರ ಮೇಲೆ ಕಲ್ಲುಗಳನ್ನು ಎಸೆದು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.