ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಚೆನ್ನೈ ಮತ್ತು ತಿರುವನಂತಪುರ ವಿಭಾಗದ 10ನೇ ವರ್ಗದ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಚೆನ್ನೈ ವಿಭಾಗದಲ್ಲೇ ಕರ್ನಾಟಕದ ಸಿಬಿಎಸ್ಇ ಶಾಲೆಗಳು ಬರಲಿವೆ.
ದೇಶದ ಇತರ ಭಾಗಗಳ ವಿದ್ಯಾರ್ಥಿಗಳ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಸಿಬಿಎಸ್ಇ ವೆಬ್ಸೈಟ್ ಮೂಲಕವಲ್ಲದೆ ಮೊಬೈಲ್ನಲ್ಲಿ ಎಸ್ಎಂಎಸ್ ಮೂಲಕವೂ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ.
ಬಹುತೇಕ ಎಲ್ಲಾ ಖಾಸಗಿ ಮೊಬೈಲ್ ಜಾಲಗಳಲ್ಲೂ ಎಸ್ಎಂಎಸ್ ಮೂಲಕ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ.
ಎಸ್ಎಂಎಸ್ ಮೂಲಕ ಫಲಿತಾಂಶ ತಿಳಿಯಲು ‘ ಸಿಬಿಎಸ್ಇ10 ಎಂದು ಬರೆದ ನಂತರ ರೋಲ್ ನಂಬರ್ ಬರೆದು 57766 (ಬಿಎಸ್ಎನ್ಎಲ್), 58888111 (ಟಾಟಾ ಡೊಕೊಮೊ, ಏರ್ಸೆಲ್, ವೊಡಾಫೋನ್ ಮತ್ತು ರಿಲಾಯನ್್ಸ) ಮತ್ತು 5207011 (ಏರ್ಟೆಲ್)ಗೆ ಸಂದೇಶ ಕಳುಹಿಸಿದರೆ ಫಲಿತಾಂಶ ತಿಳಿಯುತ್ತದೆ. ಈ ಸೇವೆಗೆ ಕೇವಲ ಒಂದು ರೂಪಾಯಿ ತಗುಲುತ್ತದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ ಮಾಡಿರುವ ವ್ಯವಸ್ಥೆಯಲ್ಲಿ ಧ್ವನಿ ಸಂವಹನದ ಮೂಲಕವೂ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ.
ದೆಹಲಿಯ ಹೊರಗಿನ ಬಿಎಸ್ಎನ್ಎಲ್ ಗ್ರಾಹಕರು ಐವಿಆರ್ಎಸ್ ಮೂಲಕ ಫಲಿತಾಂಶ ಪಡೆಯುವುದಾದರೆ 1255536 ಸಂಖ್ಯೆಗೆ ಕರೆ ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.