ADVERTISEMENT

ಸುಸ್ಥಿತಿಯಲ್ಲಿ ಮಂಗಳ ನೌಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2014, 19:30 IST
Last Updated 13 ಸೆಪ್ಟೆಂಬರ್ 2014, 19:30 IST

ಚೆನ್ನೈ (ಪಿಟಿಐ): ಶೇ 95ರಷ್ಟು ಯಾನ ಪೂರ್ಣಗೊಳಿಸಿರುವ ಮಹತ್ವಾಕಾಂಕ್ಷಿ ಮಂಗಳಯಾನ ನೌಕೆಯು ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಇಸ್ರೊ ತಿಳಿಸಿದೆ. ಈ ತಿಂಗಳ 24ರಂದು ನೌಕೆಯು ಕಕ್ಷೆ ಸೇರುವ ನಿರೀಕ್ಷೆಯಿದೆ.

‘ಸೆನ್ಸರ್‌ಗಳ ಮೂಲಕ ವಿವಿಧ ಭಾಗಗಳ ಸ್ಥಿತಿಗತಿಯ ಬಗ್ಗೆ ಪ್ರಮುಖ ಮಾಹಿತಿಗಳನ್ನು ನೌಕೆ ರವಾನಿಸುತ್ತಿದೆ. ಅದನ್ನು ದೂರಸ್ಥ ಮಾಪಕ ಸಂಕೇತ ಎಂದು ಕರೆಯಲಾಗುತ್ತದೆ. ಅದರ ಮಾಹಿತಿ ಪ್ರಕಾರ ನೌಕೆಯು ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

‘21.1 ಕೋಟಿ ಕಿ.ಮೀ. ದೂರದಿಂದ 2.2 ಮೀಟರ್‌ ಇರುವ ‘ಹೈ ಗೇನ್‌ ಆಂಟೆನಾ’ ಮೂಲಕ ನೌಕೆ ಸಂಕೇತ­ಗಳನ್ನು ರವಾನಿಸುತ್ತಿದೆ. ಶೇ 95ರಷ್ಟು ಪ್ರಯಾಣ ಮುಗಿಸಿರುವ ನೌಕೆಯು ಮಂಗಳನ ಕಕ್ಷೆಯಿಂದ 4 ಕೋಟಿ ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿದೆ’ ಎಂದು ಇಸ್ರೊ ಹೇಳಿದೆ.

ನೌಕೆ ಉಡಾವಣೆಗೊಂಡ ಬಳಿಕ ಕಳೆದ 10 ತಿಂಗಳಿನಿಂದ ನಿದ್ರಾವಸ್ಥೆಯಲ್ಲಿರುವ ದ್ರವ್ಯ ಎಂಜಿನ್‌ ಅನ್ನು ಸೆ. 24ರಂದು ಮರುಚಾಲನೆಗೊಳಿಸಬೇಕಾದ ಸವಾಲನ್ನು ವಿಜ್ಞಾನಿಗಳು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.