ADVERTISEMENT

ಸೇನಾ ಕಾಪ್ಟರ್ ಪತನ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 9:39 IST
Last Updated 1 ಅಕ್ಟೋಬರ್ 2014, 9:39 IST

ಬರೇಲಿ (ಪಿಟಿಐ): ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್‌ ಪತನಗೊಂಡು ಮೂವರು ಅಧಿಕಾರಿಗಳು ಸಾವನ್ನಪ್ಪಿದ ಘಟನೆ ಬುಧವಾರ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಾಪ್ಟರ್ ಇಲ್ಲಿನ ವಾಯುನೆಲೆಯಿಂದ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಈ ದುರಂತ ಸಂಭವಿಸಿದೆ.

ಪೈಲಟ್‌ಗಳಾದ  ಮೇಜರ್‌ ಅಭಿಜಿತ್‌ ಥಾಪಾ (29), ಕ್ಯಾಪ್ಟನ್‌ ಅವಿನಾಶ್ (26) ಹಾಗೂ ಫ್ಲೈಟ್‌ ಎಂಜಿನಿಯರ್‌ ಮೇಜರ್‌ ವಿಕಾಸ್‌ ಬರ್ಯಾನಿ (29) ಮೃತದುರ್ದೈವಿಗಳು.

ADVERTISEMENT

‘ಇಂದು ಬೆಳಿಗ್ಗೆ ಹೆಲಿಕಾಪ್ಟರ್‌ ಟೇಕ್‌ಆಫ್ ಕ್ಷಣಗಳಲ್ಲಿಯೇ  ದುರಂತಕ್ಕೀಡಾಗಿದೆ’ ಎಂದು ಲಖನೌ ಪೊಲೀಸ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ತಾಂತ್ರಿಕ ದೋಷವೇ ಕಾಪ್ಟರ್ ಪತನಕ್ಕೆ ಕಾರಣ ಎನ್ನಲಾಗಿದೆ. ದುರ್ಘಟನೆಯಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೂವರು ಕೊನೆಯುಸಿರೆಳೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾಪ್ಟರ್ ಟೇಕ್‌ಆಫ್‌ ಆಗುತ್ತಿದ್ದಂತೆಯೇ ದೋಷವಿದ್ದಂತೆ ಕಂಡಿತು. ತಕ್ಷಣವೇ ಬೆಂಕಿ ಹೊತ್ತಿಕೊಂಡಿತು. ಬಳಿಕ ವಾಯುನೆಲೆಯಲ್ಲಿಯೇ ಪತನಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.