ADVERTISEMENT

ಸೇನಾ ನೆಲೆಗಳಿಗೆ ಭದ್ರತೆ

ಐಎಸ್‌ಐ ಬೇಹುಗಾರ ಸೆರೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:30 IST
Last Updated 14 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸು ತ್ತಿದ್ದ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯೊಬ್ಬನನ್ನು ಬಂಧಿಸಿದ ನಂತರ ದೇಶದ ದಕ್ಷಿಣ ಭಾಗದಲ್ಲಿನ ಸೇನಾ ಮತ್ತು ದೂತಾವಾಸ ಕಚೇರಿಗಳಿಗೆ ಭದ್ರತೆ ಹೆಚ್ಚಿಸಲಾಗಿದೆ.

ಅರುಣ್ ಸೆಲ್ವರಾಜನ್ ಎಂಬಾತ­ನನ್ನು ಚೆನ್ನೈನಲ್ಲಿ ಕಳೆದ ವಾರ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಐಎ) ಬಂಧಿಸಿತ್ತು. ಈತನಿಂದ ಕರಾವಳಿ ಕಾವಲು ಪಡೆಯ ಸಂಕೀರ್ಣ ಸೇರಿದಂತೆ ದೇಶದ ಸೇನಾ ನೆಲೆಗಳ ನಕಾಶೆ ಮತ್ತಿತರ ರಹಸ್ಯ ದಾಖಲೆಗಳನ್ನು ವಶಪಡಿಸಿ ಕೊಳ್ಳಲಾಗಿತ್ತು.

ನಿಷೇಧಿತ ಎಲ್‌ಟಿಟಿಇ ಸಂಘಟನೆಗೆ ಬೆಂಬಲ ನೀಡಿದ ಆರೋಪವನ್ನೂ ಎದು­ರಿ­ಸುತ್ತಿದ್ದ ಸೆಲ್ವರಾಜನ್‌ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಮೊದಲು ವಿಚಾರಣೆ ನಡೆಸಲಾಗಿತ್ತು. ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಆಯ ಕ­ಟ್ಟಿನ ಸ್ಥಳಗಳ ಮಾಹಿತಿಯನ್ನು ಐಎಸ್‌ಐಗೆ  ತಾನು ನೀಡಿದ್ದಾಗಿ ವಿಚಾ­ರಣೆ ವೇಳೆ ಸೆಲ್ವರಾಜನ್‌ ಒಪ್ಪಿಕೊಂಡಿದ್ದ. 

ಇದೀಗ ಚೆನ್ನೈ ನ್ಯಾಯಾಲಯವನ್ನು ಸಂಪರ್ಕಿಸಿರುವ ಎನ್ಐಎ ಅಧಿಕಾರಿಗಳು ಆರೋಪಿಯನ್ನು ಸೋಮವಾರ ಪೊಲೀಸ್‌ ವಶಕ್ಕೆ ನೀಡಬೇಕು ಎಂದು ಕೋರಿದ್ದಾರೆ.

ಈ ಬೆಳವಣಿಗೆಯಿಂದಾಗಿ ಪಾಕಿಸ್ತಾನ ಐಎಸ್‌ಐ ಪರ ಯಾರಾದರೂ ಬೇಹು ಗಾರಿಕೆ ನಡೆಸುತ್ತಿದ್ದಾರೆಯೇ ಎಂಬು ದನ್ನು ಪತ್ತೆಹಚ್ಚಲು ಕಣ್ಗಾವಲು ಹೆಚ್ಚಿಸ­ಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.