ADVERTISEMENT

ಸ್ಟೆಂಟ್‌ ಉತ್ಪಾದನೆ, ಪೂರೈಕೆ ಕಡ್ಡಾಯ

ಪಿಟಿಐ
Published 21 ಫೆಬ್ರುವರಿ 2017, 19:44 IST
Last Updated 21 ಫೆಬ್ರುವರಿ 2017, 19:44 IST
ಸ್ಟೆಂಟ್‌ ಉತ್ಪಾದನೆ, ಪೂರೈಕೆ ಕಡ್ಡಾಯ
ಸ್ಟೆಂಟ್‌ ಉತ್ಪಾದನೆ, ಪೂರೈಕೆ ಕಡ್ಡಾಯ   

ನವದೆಹಲಿ: ಹೃದಯ ಸಂಬಂಧಿ ಚಿಕಿತ್ಸೆಗೆ ಬಳಸುವ ಸ್ಟೆಂಟ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸ್ಟೆಂಟ್‌ಗಳನ್ನು  ತಯಾರಿಸುವ ಕಂಪೆನಿಗಳಿಗೆ ಸರ್ಕಾರ ಸೂಚನೆ ನೀಡಿದ್ದು, ‘ಕಡ್ಡಾಯವಾಗಿ ತಯಾರಿಕೆ ಮುಂದುವರಿಸಬೇಕು ಮತ್ತು ಆಸ್ಪತ್ರೆಗಳಿಗೆ ಪೂರೈಸಬೇಕು’ ಎಂದು ಹೇಳಿದೆ.

ಔಷಧ ಬೆಲೆ ನಿಯಂತ್ರಣ ಕಾನೂನಿನ ‘ತುರ್ತು ಅಗತ್ಯ’ ಸೆಕ್ಷನ್‌ನ ಅಡಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಸೂಚನೆ ಮುಂದಿನ ಆರು ತಿಂಗಳು ಜಾರಿಯಲ್ಲಿರಲಿದೆ. ಈ ಅವಧಿಯನ್ನು ಮತ್ತೆ ಎರಡು ವಾರ ವಿಸ್ತರಿಸಲು ಕಾನೂನಿನಲ್ಲಿ ಅವಕಾಶವಿದೆ.

ಕಳೆದ ವಾರ ಸ್ಟೆಂಟ್‌ ಬೆಲೆಯ ಮೇಲೆ ಸರ್ಕಾರ ಗರಿಷ್ಠ ಮಿತಿ ಹೇರಿತ್ತು. ಇದರಿಂದ ಸ್ಟೆಂಟ್‌ಗಳ ಬೆಲೆಯಲ್ಲಿ ಶೇ 85ರಷ್ಟು ಇಳಿಕೆ ಆಗಿತ್ತು. ಆ ನಂತರ ಸ್ಟೆಂಟ್‌ ತಯಾರಿಕಾ ಕಂಪೆನಿಗಳು ಉತ್ಪಾದನೆಯನ್ನು ಕಡಿಮೆ ಮಾಡಿದ್ದು, ಕೊರತೆ ಕಾಡುತ್ತಿದೆ ಎಂದು ವರದಿಗಳು ಪ್ರಕಟವಾಗಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.