ADVERTISEMENT

ಹಕ್ಕಿ ಜ್ವರ: ಉನ್ನತ ಮಟ್ಟದ ಸಭೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ತಿರುವನಂತಪುರ (ಐಎಎನ್ಎಸ್): ಅಳಪ್ಪುಳದಲ್ಲಿ ಹಕ್ಕಿ ಜ್ವರದಿಂದ ಬಾತುಕೋಳಿ ಸತ್ತಿರುವ ಕಾರಣ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಉನ್ನತ ಮಟ್ಟದ ಸಭೆ ಕರೆದು ಚರ್ಚೆ ನಡೆಸಿದರು.

ಹಕ್ಕಿ ಜ್ವರ ಹರಡದಂತೆ ಅಗತ್ಯ ಮುಂಜಾಗರೂಕತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ವಿ. ಎಸ್. ಶಿವಕುಮಾರ್ ತಿಳಿಸಿದ್ದಾರೆ.

ಅಳಪ್ಪುಳ ಮತ್ತು ಪಟ್ಟಣಂತಿಟ್ಟಾ ಜಿಲ್ಲೆಗಳಲ್ಲಿ  ಕಳೆದ ಎರಡು ವಾರಗಳಲ್ಲಿ ಅನೇಕ ಬಾತುಕೋಳಿಗಳು ಸತ್ತಿವೆ. ಈ ಬಾತುಕೋಳಿಗಳು ಹಕ್ಕಿ ಜ್ವರದಿಂದ ಸತ್ತಿರುವುದು ಪ್ರಯೋಗಾಲಯಗಳ ವರದಿಯಿಂದ ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.