ADVERTISEMENT

ಹಳಿ ತಪ್ಪಿದ ಮಹಾಕೌಶಲ್‌ ಎಕ್ಸ್‌ಪ್ರೆಸ್‌ ರೈಲು: 50 ಜನರಿಗೆ ಗಾಯ

ಏಜೆನ್ಸೀಸ್
Published 30 ಮಾರ್ಚ್ 2017, 4:20 IST
Last Updated 30 ಮಾರ್ಚ್ 2017, 4:20 IST
ಹಳಿ ತಪ್ಪಿದ ಮಹಾಕೌಶಲ್‌ ಎಕ್ಸ್‌ಪ್ರೆಸ್‌ ರೈಲು: 50 ಜನರಿಗೆ ಗಾಯ
ಹಳಿ ತಪ್ಪಿದ ಮಹಾಕೌಶಲ್‌ ಎಕ್ಸ್‌ಪ್ರೆಸ್‌ ರೈಲು: 50 ಜನರಿಗೆ ಗಾಯ   

ನವದೆಹಲಿ/ಲಖನೌ:  ಮಹಾಕೌಶಲ್‌ ಎಕ್ಸ್‌ಪ್ರೆಸ್‌ ರೈಲು ಗುರುವಾರ ಬೆಳಗ್ಗೆ ಹಳಿತಪ್ಪಿದ್ದು 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶ ರಾಜ್ಯದ  ಮಹೋಬಾ ಪಟ್ಟಣ ಸಮೀಪ  ಕುಲಾಪಹರ್‌ ಎಂಬಲ್ಲಿ ಮಹಾಕೌಶಲ್‌ ರೈಲಿನ 8 ಬೋಗಿಗಳು ಹಳಿತಪ್ಪಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ  ಸಂಭವಿಸಿಲ್ಲ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.