ಚೆನ್ನೈ (ಪಿಟಿಐ): ಹೆಸರಾಂತ ಸಿನಿಮಾ ನಿರ್ದೇಶಕ ಕೆ.ಬಾಲಚಂದರ್ ಅವರು (84) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ
ಮಂಗಳವಾರ ಸಂಜೆ 7ರ ವೇಳೆಗೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಡಿ.3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಸಂಜೆ 6.45ರ ಹೊತ್ತಿಗೆ ಅವರಿಗೆ ಹೃದಯಾಘಾತವಾಯಿತು. ಜ್ವರ ನಿಯಂತ್ರಣದಲ್ಲಿದ್ದರೂ, ಮೂತ್ರನಾಳದ ಸೋಂಕು ಉಲ್ಬಣವಾಯಿತು.
ಕೂಡಲೇ ಚಿಕಿತ್ಸೆ ನೀಡಲಾಯಿತು. ಆದರೆ, ಅವರು ಚೇತರಿಸಿಕೊಳ್ಳಲಿಲ್ಲ 7.02ಕ್ಕೆ ಅಸುನೀಗಿದರು’ ಎಂದು ಆಸ್ಪತ್ರೆ ವಕ್ತಾರರು ಹೇಳಿದ್ದಾರೆ.
ಬಾಲಚಂದರ್ ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ. ಅವರ ಮತ್ತೊಬ್ಬ ಪುತ್ರ ಕೈಲಾಸಂ ಕಳೆದ ಆಗಸ್ಟ್ 15ರಂದು ಸಾವನ್ನಪ್ಪಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.