ADVERTISEMENT

ಹೇಳಿಕೆ ಹಿಂಪಡೆಯದಿದ್ದರೆ, ರೂಪಾ ವಿರುದ್ಧ ದಾವೆ: ಎಐಎಡಿಎಂಕೆ

ಪಿಟಿಐ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಹೇಳಿಕೆ ಹಿಂಪಡೆಯದಿದ್ದರೆ, ರೂಪಾ ವಿರುದ್ಧ ದಾವೆ: ಎಐಎಡಿಎಂಕೆ
ಹೇಳಿಕೆ ಹಿಂಪಡೆಯದಿದ್ದರೆ, ರೂಪಾ ವಿರುದ್ಧ ದಾವೆ: ಎಐಎಡಿಎಂಕೆ   

ಚೆನ್ನೈ: ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗಿದೆ ಎಂದಿರುವ  ಕರ್ನಾಟಕದ ಹಿರಿಯ ಪೊಲೀಸ್‌ ಅಧಿಕಾರಿ ಡಿ. ರೂಪಾ ತಮ್ಮ ಹೇಳಿಕೆಯನ್ನು ಹಿಂಪಡೆಯದಿದ್ದರೆ ಅವರ ವಿರುದ್ಧ ದಾವೆ ಹೂಡುವುದಾಗಿ ಎಐಎಡಿಎಂಕೆ ತಿಳಿಸಿದೆ.

‘ಶಶಿಕಲಾ ಮೇಲೆ ಹೊರಿಸಿರುವ ಸುಳ್ಳು ಆರೋಪಗಳನ್ನು ಹಿಂಪಡೆಯದಿದ್ದರೆ, ಕಾನೂನು ಕ್ರಮ ಜರುಗಿಸಲಿದ್ದೇವೆ’ ಎಂದು ಪಕ್ಷದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಎ. ಪುಗಳೇಂದಿ ಹಾಗೂ ತಮಿಳುನಾಡಿನ ಪೆರಂಬದೂರಿನ ಶಾಸಕ ಪಿ.ವೆಟ್ರಿವೇಲು ಹೇಳಿರುವುದಾಗಿ ಎಐಎಡಿಎಂಕೆ ಮುಖವಾಣಿ ‘ನಮಧು ಡಾ.ಎಂಜಿಆರ್‌’ನಲ್ಲಿ ತಿಳಿಸಲಾಗಿದೆ.

ಜೈಲಿನ ನಿಯಮ ಉಲ್ಲಂಘಿಸಿ, ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದು ಬಂದೀಖಾನೆ ಡಿಐಜಿಯಾಗಿದ್ದ ರೂಪಾ ಕೆಲದಿನಗಳ ಹಿಂದೆ ಸರ್ಕಾರಕ್ಕೆ ವರದಿ ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾದ ಕಾರಣ ಅವರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

ADVERTISEMENT

ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಕಳೆದ ಫೆಬ್ರುವರಿಯಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.