ADVERTISEMENT

‘ಅಮ್ಮಾ ಸಿಮೆಂಟ್’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2014, 19:30 IST
Last Updated 26 ಸೆಪ್ಟೆಂಬರ್ 2014, 19:30 IST

ಚೆನ್ನೈ (ಪಿಟಿಐ): ದರ ಹೆಚ್ಚಳವಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗಳಿಂದ ಸಿಮೆಂಟ್ ಖರೀದಿಸಿ ಪ್ರತಿ ಚೀಲ ಸಿಮೆಂಟ್‌ನ್ನು ₨190ರಂತೆ ಮಾರಾಟ ಮಾಡುವ ‘ಅಮ್ಮಾ ಸಿಮೆಂಟ್ ಯೋಜನೆ’ಯನ್ನು ತಮಿಳುನಾಡು ಸರ್ಕಾರ ಆರಂಭಿಸಿದೆ.

ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅವರ ಬೆಂಬಲಿಗರು ಅಮ್ಮಾ ಎಂದು ಕರೆಯುತ್ತಿರುವುದರಿಂದ ಅನೇಕ ಜನಪ್ರಿಯ ಯೋಜನೆಗಳಗೆ ‘ಅಮ್ಮಾ’ ಎಂದೇ ಹೆಸರಿಡಲಾಗಿದೆ.

ಸಿಮೆಂಟ್‌ ಕಂಪೆನಿಗಳು ಇತ್ತೀಚೆಗೆ ದರ ಹೆಚ್ಚಿಸಿದ್ದು, ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇರುವುದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣ ಹೊರೆಯಾಗಬಾರದು ಎಂಬ ಕಾರಣಕ್ಕೆ ಕಡಿಮೆ ಬೆಲೆಯಲ್ಲಿ ಸಿಮೆಂಟ್ ಒದಗಿಸಲು  ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಜಯಲಲಿತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.