ADVERTISEMENT

‘ಮುಂದಿನ ವರ್ಷ ನೂತನ ಶೈಕ್ಷಣಿಕ ನೀತಿ ಜಾರಿ ಸಂಭವ’

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2014, 19:30 IST
Last Updated 2 ನವೆಂಬರ್ 2014, 19:30 IST

ಕೊಚ್ಚಿ(ಪಿಟಿಐ): ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನೂತನ ಶೈಕ್ಷಣಿಕ ನೀತಿ ಮುಂದಿನ ವರ್ಷ ಆರಂಭವಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಭಾನುವಾರ ತಿಳಿಸಿದ್ದಾರೆ.

‘ನೂತನ ಶೈಕ್ಷಣಿಕ ನೀತಿಯ ಬಗ್ಗೆ ಚರ್ಚೆಗಳು  ಮುಂದಿನ ವರ್ಷ ಆರಂಭವಾಗಲಿದೆ. ಹೊಸ ಶೈಕ್ಷಣಿಕ ನೀತಿ ರೂಪಿಸುತ್ತೇವೆ. ಇದಕ್ಕೆ 7 ತಿಂಗಳುಗಳಿಂದ 3 ವರ್ಷಗಳು ಬೇಕು. ರಾಜಕಾರ­ಣಿಗಳು, ಅಧಿಕಾರಿಗಳು ಹಾಗೂ ತಜ್ಞರ ಸಲಹೆಗಳನ್ನೂ ಪಡೆಯ­ಲಾಗುತ್ತದೆ’ ಎಂದರು.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ  ಆಯೋಜಿಸಿದ್ದ ಕಾರ್ಯಕ್ರ­ಮ­ದಲ್ಲಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.