ADVERTISEMENT

₹ 3770 ಕೋಟಿ ಕಪ್ಪು ಹಣ ಘೋಷಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2015, 10:17 IST
Last Updated 1 ಅಕ್ಟೋಬರ್ 2015, 10:17 IST

ನವದೆಹಲಿ (ಪಿಟಿಐ): ದೇಶದ 638 ಜನ ₹ 3,770 ಕೋಟಿ ಕಪ್ಪು ಹಣ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಒಟ್ಟು 638  ಜನ ತಾವು ಹೊಂದಿರುವ ಕಪ್ಪು ಹಣದ ಘೋಷಣೆ ಮಾಡಿಕೊಂಡಿದ್ದಾರೆ. ಕಪ್ಪು ಹಣ ಘೋಷಣೆ ಮಾಡಿಕೊಳ್ಳಲು ಸೆ.30 ಕೊನೆಯ ದಿನವಾಗಿತ್ತು. ಡಿಸೆಂಬರ್‌ 31ರೊಳಗೆ ದಂಡ ಕಟ್ಟಿ ಕಪ್ಪುಹಣ ಘೋಷಣೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ, ಕರ್ನಾಟಕ ರಾಜ್ಯಗಳ ಹಲವರು ಕಪ್ಪು ಹಣವನ್ನು ಘೋಷಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.