ADVERTISEMENT

11 ಸಾವು, 7 ಮಂದಿಗೆ ಗಾಯ

ಆಂಧ್ರ: ಪಟಾಕಿ ತಯಾರಿಕೆ ಘಟಕದಲ್ಲಿ ಸ್ಫೋಟ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಹೈದರಾಬಾದ್ (ಪಿಟಿಐ): ಕರಾವಳಿ ಭಾಗದ ಪೂರ್ವ ಗೋದಾವರಿ ಜಿಲ್ಲೆಯ ವಕಟಿಪ್ಪ ಗ್ರಾಮದ ಪಟಾಕಿ ತಯಾರಿಕ ಘಟಕದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ 11 ಜನರು ಸಾವಿಗೀಡಾಗಿದ್ದು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಪಟಾಕಿ ತಯಾರಿಕಾ ಘಟಕದಲ್ಲಿ ಬಹು ದೊಡ್ಡ ಸದ್ದು ಬಂದಿದ್ದು,  ಈತನಕ 11 ಜನ ಸಾವನ್ನಪ್ಪಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕಾರ್ಮಿಕರು ಪಟಾಕಿ ತಾಯಾರಿಕಾ ಕೆಲಸದಲ್ಲಿ ನಿರತರಾದ ವೇಳೆ ಈ ಸದ್ದು ಕೇಳಿಸಿದೆ. ಈ ಸಮಯ ಘಟಕದಲ್ಲಿ 18 ಕಾರ್ಮಿಕರು ಮಾಡುತ್ತಿದ್ದರು.

‘ಮೃತದೇಹಗಳು ಸಂಪೂರ್ಣ ಸುಟ್ಟುಹೋಗಿದ್ದು ಎಲ್ಲ ಗಾಯಾಳು ಗಳನ್ನು ಕಾಕಿನಾಡ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ರವಿ ಪ್ರಕಾಶ್  ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಪಟಾಕಿ ಘಟಕದಲ್ಲಿ ಕಂಡುಬಂದ ಸ್ಫೋಟಕಕ್ಕೆ ರಾಸಾಯನಿಕಗಳ  ಪ್ರತಿಕ್ರಿಯೇ ಕಾರಣ ಎನ್ನಲಾಗಿದೆ.
2ಲಕ್ಷ ಪರಿಹಾರ: ಮೃತಪಟ್ಟವರಿಗೆ ಕುಟುಂಬ ದವರಿಗೆ ತಲಾ ರೂ. 2 ಲಕ್ಷ ಪರಿಹಾರ ನೀಡ ಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ದು ಘೋಷಿಸಿದ್ದಾರೆ.

ಈ ಕುರಿತು ಸಂಪೂರ್ಣ ತನಿಖೆ ಕೈಗೊಳ್ಳುವಂತೆ ಪೂರ್ವ ಗೋದಾವರಿ ಜಿಲ್ಲಾಧಿಕಾರಿಗೆ ಮುಖ್ಯ ಮಂತ್ರಿಗಳು ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.