ADVERTISEMENT

ಇಸ್ರೊ 100ನೇ ಉಪಗ್ರಹ ಉಡಾವಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 5:12 IST
Last Updated 12 ಜನವರಿ 2018, 5:12 IST
ಚಿತ್ರ: ಡಿಡಿ ದೂರದರ್ಶನ ಲೈವ್‌ ವಿಡಿಯೊ ಗ್ರಾಬ್
ಚಿತ್ರ: ಡಿಡಿ ದೂರದರ್ಶನ ಲೈವ್‌ ವಿಡಿಯೊ ಗ್ರಾಬ್   

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿಸಿದ 100ನೇ ಉಪಗ್ರಹ ಉಡಾವಣೆ ಶುಕ್ರವಾರ ಯಶಸ್ವಿಯಾಗಿ ನಡೆಯಿತು.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಹೊತ್ತ ಧ್ರುವಗಾಮಿ ಉಡಾವಣಾ ವಾಹನ(ಪಿಎಸ್‌ಎಲ್‌ವಿ ಸಿ–40) ಬಾಹ್ಯಾಕಾಶಕ್ಕೆ ಹಾರಿತು ಎಂದು ಇಸ್ರೋ ಟ್ವೀಟ್‌ ಮಾಡಿದೆ.

’ರಾಕೆಟ್ ಕಾರ್ಟೊಸ್ಯಾಟ್–2 ದೂರಸಂವೇದಿ ಉಪಗ್ರಹ, ಸೂಕ್ಷ್ಮ ಉಪಗ್ರಹ, ನ್ಯಾನೊ ಉಪಗ್ರಹ ಹಾಗೂ 28 ವಿದೇಶಿ ನ್ಯಾನೊ ಉಪಗ್ರಹಗಳನ್ನು ಪಿಎಸ್‌ಎಲ್‌ವಿ -ಸಿ40 ಹೊತ್ತೊಯ್ದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.