ADVERTISEMENT

ತೂತ್ತುಕುಡಿ ತಾಮ್ರಘಟಕ: ತ.ನಾಡಿಗೆ ಎನ್‌ಜಿಟಿ ನೋಟಿಸ್

ಪಿಟಿಐ
Published 5 ಜುಲೈ 2018, 11:07 IST
Last Updated 5 ಜುಲೈ 2018, 11:07 IST

ನವದೆಹಲಿ: ತೂತ್ತುಕುಡಿ ತಾಮ್ರಸಂಸ್ಕರಣಾಘಟಕ ಮುಚ್ಚುವ ಸಂಬಂಧ ತಮಿಳುನಾಡು ಸರ್ಕಾರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೋಟಿಸ್ ನೀಡಿದೆ.

ತಾಮ್ರಘಟಕವನ್ನು ಶಾಶ್ವತವಾಗಿ ಮುಚ್ಚಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜ್ಯ ಸರ್ಕಾರ ನೀಡಿದ್ದ ಆದೇಶ ಪ್ರಶ್ನಿಸಿ ವೇದಾಂತ ಕಂಪೆನಿ ಎನ್‌ಜಿಟಿಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿವಿಚಾರಣೆ ನಡೆಸಿದ ಎನ್‌ಜಿಟಿ ಹಂಗಾಮಿಮುಖ್ಯಸ್ಥ ನ್ಯಾಯಮೂರ್ತಿ ಜವಾದ್ ರಹೀಂ ಅವರ ಪೀಠ, ಜುಲೈ 18ರೊಳಗೆ ಪ್ರತಿಕ್ರಿಯೆ ದಾಖಲಿಸುವಂತೆ ನೋಟಿಸ್‌ನಲ್ಲಿ ಸೂಚಿಸಿದೆ.

ADVERTISEMENT

ವೇದಾಂತ ಸಲ್ಲಿಸಿರುವ ಅರ್ಜಿಯ ನಿರ್ವಹಣೆ ಪ್ರಶ್ನಿಸಿ ಹೇಳಿಕೆ ದಾಖಲಿಸಲು ರಾಜ್ಯ ಸರ್ಕಾರಕ್ಕೆ ಮಂಡಳಿ ಅನುಮತಿ ನೀಡಿದೆ.

ಗಂಧಕಾಮ್ಲ ಸೋರಿಕೆಯಿಂದಾಗಿ ಘಟಕ ಮುಚ್ಚುವಂತೆ ಆಗ್ರಹಿಸಿ ತೀವ್ರಸ್ವರೂಪದಲ್ಲಿ ಪ್ರತಿಭಟನೆ ನಡೆದಿತ್ತು. ಬಳಿಕ ಅದು ಹಿಂಸಾಚಾರಕ್ಕೆ ತಿರುಗಿ 13 ಮಂದಿ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.