ADVERTISEMENT

ಅನುರಾಗ್ ತಿವಾರಿ ಸಾವಿನ ಪ್ರಕರಣ: ಮಾಹಿತಿ ಪಡೆಯಲು ಲಖನೌಗೆ ತೆರಳಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 17 ಮೇ 2017, 13:29 IST
Last Updated 17 ಮೇ 2017, 13:29 IST
ಅನುರಾಗ್ ತಿವಾರಿ ಸಾವಿನ ಪ್ರಕರಣ: ಮಾಹಿತಿ ಪಡೆಯಲು ಲಖನೌಗೆ ತೆರಳಿದ ಅಧಿಕಾರಿಗಳು
ಅನುರಾಗ್ ತಿವಾರಿ ಸಾವಿನ ಪ್ರಕರಣ: ಮಾಹಿತಿ ಪಡೆಯಲು ಲಖನೌಗೆ ತೆರಳಿದ ಅಧಿಕಾರಿಗಳು   

ಬೆಂಗಳೂರು: ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಮುಖ್ಯಮಂತ್ರಿಗಳು ಐಎಎಸ್ ಅಧಿಕಾರಿಗಳಾದ ಅಭಿರಾಂ ಶಂಕರ್, ಪಂಕಜ್ ಕುಮಾರ್ ಪಾಂಡೆ ಅವರನ್ನು ಲಖನೌ ಗೆ ಕಳುಹಿಸಿದ್ದಾರೆ.

ಉತ್ತರಪ್ರದೇಶದ ರಾಜಧಾನಿ ಲಖನೌದ ರಸ್ತೆ ಬದಿಯಲ್ಲಿ ಐಎಎಸ್ ಅಧಿಕಾರಿ ಅನುರಾಗ್‌ ತಿವಾರಿ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿತ್ತು. 'ಇದೊಂದು ನಿಗೂಢ ಸಾವು' ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕ ಕೇಡರ್‌ನ ಅನುರಾಗ್‌ ತಿವಾರಿ ರಾಜ್ಯದಲ್ಲಿ ಕೆಲಸ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.