ADVERTISEMENT

ಅಮ್ನೇಶಿಯ ಪಬ್ ದಾಳಿ: ಆರೋಪಿಗಳು ಖುಲಾಸೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ಅಮ್ನೇಶಿಯ ಪಬ್ ದಾಳಿ: ಆರೋಪಿಗಳು ಖುಲಾಸೆ
ಅಮ್ನೇಶಿಯ ಪಬ್ ದಾಳಿ: ಆರೋಪಿಗಳು ಖುಲಾಸೆ   

ಮಂಗಳೂರು: ನಗರದ ಬಲ್ಮಠದ ಅಮ್ನೇಶಿಯ ಪಬ್‌ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 26 ಆರೋಪಿಗಳನ್ನು ಇಲ್ಲಿನ ಮೂರನೇ ಜೆಎಂಎಫ್‌ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

2009 ರ ಜನವರಿ 24 ರಂದು ರಾತ್ರಿ ಅಮ್ನೇಶಿಯ ಪಬ್‌ನಲ್ಲಿ ಪಾರ್ಟಿ ನಡೆಸುತ್ತಿದ್ದ ಯುವಕ, ಯುವತಿಯರ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಈ ಕುರಿತು ಪ್ರಮೋದ್ ಮುತಾಲಿಕ್ ಸೇರಿದಂತೆ 40ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಧೀಶ ಮಂಜುನಾಥ್ ಆದೇಶ ನೀಡಿದರು. ಆರೋಪಿಗಳ ಪರ ವಕೀಲರಾದ ಆಶಾ ನಾಯಕ್ ಮತ್ತು ವಿನೋದ್ ಕುಮಾರ್ ವಾದ ಮಂಡಿಸಿದ್ದರು.

ADVERTISEMENT

ತೀರ್ಪು ಪ್ರಕಟಣೆಯ ವೇಳೆ ಪ್ರಮೋದ್ ಮುತಾಲಿಕ್ ಖುದ್ದು ಹಾಜರಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಸತ್ಯಕ್ಕೆ ಸಂದ ಜಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.