ADVERTISEMENT

ಅಶ್ವಿನ್‌ ಎಸ್‌ಐಟಿ ವಶಕ್ಕೆ

ಭಾಸ್ಕರರಾವ್‌ ಆ.15ರವರೆಗೂ ರಜೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಬೆಂಗಳೂರು: ಲೋಕಾಯುಕ್ತ ವೈ. ಭಾಸ್ಕರರಾವ್ ಪುತ್ರ ಅಶ್ವಿನ್‌ ರಾವ್‌ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಒಂಬತ್ತು ದಿನ ಎಸ್‌ಐಟಿ ವಶಕ್ಕೆ ನೀಡಿದೆ.

ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಚೆನ್ನಬಸಪ್ಪ ಸಲ್ಲಿಸಿರುವ ದೂರು ಆಧರಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಶ್ವಿನ್ ಅವರನ್ನು ಮಂಗಳವಾರ ನಸುಕಿನಲ್ಲಿ ಅಧಿಕೃತವಾಗಿ ಬಂಧಿಸಿತ್ತು. ನ್ಯಾಯಾಲಯಕ್ಕೆ ಮಂಗಳವಾರ ಮಧ್ಯಾಹ್ನ ಹಾಜರುಪಡಿಸಲಾಯಿತು.

ತನಿಖೆಗಾಗಿ ಅವರನ್ನು 14 ದಿನ ತನ್ನ ವಶಕ್ಕೆ ನೀಡಬೇಕು ಎಂಬ ಎಸ್‌ಐಟಿ ಕೋರಿಕೆಯನ್ನು  ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ಜಿ. ಬೋಪಯ್ಯ ಒಪ್ಪಿಕೊಳ್ಳಲಿಲ್ಲ. ಬದಲಾಗಿ   ಒಂಬತ್ತು ದಿನ ಎಸ್‌ಐಟಿ ವಶಕ್ಕೆ ನೀಡಿದರು. ಈ ಮಧ್ಯೆ ಲೋಕಾಯುಕ್ತ ಭಾಸ್ಕರರಾವ್‌ ಆ. 15ರ ವರೆಗೆ ರಜೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.