ADVERTISEMENT

ಇಂದು ಬಿಬಿಸಿ ರೇಡಿಯೊದಲ್ಲಿ ‘ಕನ್ನಡ ಡಿಂಡಿಮ’ ಪ್ರಸಾರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2015, 19:27 IST
Last Updated 17 ಅಕ್ಟೋಬರ್ 2015, 19:27 IST

ಬೆಂಗಳೂರು: ಕುವೆಂಪು ಗೀತೆಗಳ ಸಾಲುಗಳನ್ನು ಬಳಸಿ ರೂಪಿಸಿರುವ ‘ಬಾರಿಸು ಕನ್ನಡ ಡಿಂಡಿಮ’ ಹಾಡು ಇಂಗ್ಲೆಂಡ್‌ನ ರೇಡಿಯೊ ಬಿಬಿಸಿಯಲ್ಲೂ ಭಾನುವಾರ ಬಿತ್ತರವಾಗಲಿದೆ. ಅಶಾಂತಿ ಓಂಕಾರ್‌ ಅವರು ಭಾರತೀಯ ಕಾಲಮಾನ ಸಂಜೆ 6.30ರಿಂದ 8.30ರವರೆಗೆ ನಡೆಸಿಕೊಡುವ ‘ಸಂಡೇ ಶೋ’ ಕಾರ್ಯಕ್ರಮದಲ್ಲಿ ಇದು ಬಿತ್ತರ ಆಗಲಿದೆ ಎಂದು ಕೃಪಾಕರ–ಸೇನಾನಿ ಫೀಚರ್ಸ್‌ನ ಕೃಪಾಕರ ‘ಪ್ರಜಾವಾಣಿ’ಗೆ ತಿಳಿಸಿದರು.

www.bbc.co.uk/radio/ player/bbc asian network ಮೂಲಕ ಕಾರ್ಯಕ್ರಮ ಆಲಿಸಬಹುದು. ಒಂದು ವೇಳೆ ಈ ವೇಳೆಯಲ್ಲಿ ಸಾಧ್ಯ ಆಗದಿದ್ದಲ್ಲಿ,  www.bbc.co.uk/programmes/b04mv017  ಸಂಪರ್ಕದ ಮೂಲಕ ಮತ್ತೆ  ಕೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.