ADVERTISEMENT

‘ಉಡುಪಿ ಪರ್ಯಾಯ ಉತ್ಸವ: ಸಮಸ್ತ ನಾಡಿನ ಸಂಭ್ರಮ’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 20:33 IST
Last Updated 30 ಡಿಸೆಂಬರ್ 2017, 20:33 IST
ಶನಿವಾರ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಭಕ್ತರಿಗೆ ಆಹ್ವಾನ ನೀಡಿದರು.
ಶನಿವಾರ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಭಕ್ತರಿಗೆ ಆಹ್ವಾನ ನೀಡಿದರು.   

ಮೂಲ್ಕಿ: ‘ಉಡುಪಿ ಕೃಷ್ಣನ ಪೂಜಾ ಕೈಂಕರ್ಯದ ನನ್ನ ದ್ವಿತೀಯ ಪರ್ಯಾ ಯಕ್ಕೆ ಸರ್ವ ಸಿದ್ಧತೆ ನಡೆದಿದೆ. ಇದು ಸಮಸ್ತ ನಾಡಿನ ಸಂಭ್ರಮವಾಗಿದೆ’ ಎಂದು ಪಲಿಮಾರು ಮಠಾಧೀಶ ವಿದ್ಯಾ ಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಪರ್ಯಾಯ ಮಹೋತ್ಸವಕ್ಕೆ ಅವರು ಆಹ್ವಾನ ನೀಡಿದರು.

ಸ್ವಾಮೀಜಿ ತಮ್ಮ ಪೂರ್ವಾಶ್ರಮದ ಹುಟ್ಟೂರು, ತಂತ್ರಿಯಾಗಿ ಸೇವೆಸಲ್ಲಿಸಿದ್ದ ಕಟೀಲು ದೇಗುಲದಲ್ಲಿ ಚಂಡಿಕಾ ಹೋಮ, ಪಟ್ಟದ ದೇವರ ಪೂಜೆ ನೆರವೇರಿಸಿದರು. ಭಿಕ್ಷೆ ಸ್ವೀಕರಿಸಿ, ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಿದರು.

ADVERTISEMENT

ಜನವರಿ 15ರಂದು ಮಧ್ಯಾಹ್ನ 2ಗಂಟೆಗೆ ಕಟೀಲು ದೇವಸ್ಥಾನದಿಂದ ಹೊರಡಲಿರುವ ಹುಟ್ಟೂರ ಹೊರೆ ಕಾಣಿಕೆಯ ಕಚೇರಿಯನ್ನು ಉದ್ಘಾಟಿಸಿದ ಸ್ವಾಮೀಜಿ, ಪರ್ಯಾಯದ ದಿನದ ಅನ್ನಸಂತರ್ಪಣೆಯ ವೆಚ್ಚವನ್ನು ಭರಿಸಲಿರುವ ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರನ್ನು ಅಭಿನಂದಿಸಿದರು.

ಕಟೀಲು ದೇಗುಲದ ಮೊಕ್ತೇಸರ ರಾದ ವಾಸುದೇವ ಆಸ್ರಣ್ಣ, ಅರ್ಚಕ ರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕ ಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ, ವೇದವ್ಯಾಸ ತಂತ್ರಿ, ಕೊಡೆತ್ತೂರು ದೇವೀಪ್ರಸಾದ ಶೆಟ್ಟಿ, ಕೆ.ವಿ. ಶೆಟ್ಟಿ, ಅತ್ತೂರು ಪ್ರಸನ್ನ ಶೆಟ್ಟಿ, ಭುವನಾಭಿರಾಮ ಉಡುಪ, ತಿಮ್ಮಪ್ಪ ಕೋಟ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.