ADVERTISEMENT

ಎತ್ತಿನಗಾಡಿ ಓಟ..

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 9:36 IST
Last Updated 25 ಅಕ್ಟೋಬರ್ 2014, 9:36 IST

ಎತ್ತಿನಗಾಡಿ ಓಟ... ಎಚ್.ಡಿ. ಕೋಟೆ ಪಟ್ಟಣ ಶುಕ್ರವಾರ ಅಕ್ಷರಶಃ ಹುರುಪು, ಹುಮ್ಮಸ್ಸಿನಿಂದ ಕೂಡಿತ್ತು. ದೀಪಾವಳಿ ಅಂಗವಾಗಿ ಪಟ್ಟಣ ಹಾಗೂ ಸುತ್ತಲಿನ ಕೆಲ ರೈತರು ತಮ್ಮ ಎತ್ತಿನಗಾಡಿಗಳನ್ನು ಜಿದ್ದಿಗೆ ಬಿದ್ದು ಓಡಿಸುವ ಮೂಲಕ ವಿಶಿಷ್ಟವಾಗಿ ಹಬ್ಬ ಆಚರಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ 15 ಎತ್ತಿನಗಾಡಿಗಳು ಈ ಓಟದಲ್ಲಿ ಭಾಗವಹಿಸಿದ್ದವು. ಹನುಮಂತನಗರ ಮತ್ತು ಸಿದ್ದಪ್ಪಾಜಿ ರಸ್ತೆಯಲ್ಲಿ ಸೇರಿದ ಸಾವಿರಾರು ಜನ ಕೂಗಾಟ, ಚೀರಾಟದ ಮೂಲಕ ಇನ್ನಿಲ್ಲದಂತೆ ಸಂಭ್ರಮಿಸಿದರು. ಜನ ಹೋ... ಎಂದು ಕೂಗುತ್ತಿದ್ದಂತೆ ಜೋಡೆತ್ತುಗಳು ಬಂಡಿ ಎಳೆದುಕೊಂಡು ಛಂಗನೆ ಹಾರಿದವು. ಎತ್ತುಗಳಿಗೆ ಮತ್ತಷ್ಟು ಹುರುಪು ತುಂಬಲು ಕೆಲವರು ಚಕ್ಕಡಿ ಹಿಂದೆ ಪಟಾಕಿ ಸಿಡಿಸಿದರು. ಸದಾ ಕಾರು, ಬಸ್ಸು, ಬೈಕುಗಳ ಓಡಾಟ ನೋಡಿದ್ದ ಪಟ್ಟಣದ ಜನತೆಗೆ ಎತ್ತಿನಗಾಡಿ ಓಟ ಹೊಸ ರಂಜನೆ ನೀಡಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.