ADVERTISEMENT

ಐಎಎಸ್‌ ಬಡ್ತಿ ಪಟ್ಟಿ ವಾಪಸ್‌

​ಪ್ರಜಾವಾಣಿ ವಾರ್ತೆ
Published 25 ಮೇ 2016, 19:32 IST
Last Updated 25 ಮೇ 2016, 19:32 IST
ಐಎಎಸ್‌ ಬಡ್ತಿ ಪಟ್ಟಿ ವಾಪಸ್‌
ಐಎಎಸ್‌ ಬಡ್ತಿ ಪಟ್ಟಿ ವಾಪಸ್‌   

ನವದೆಹಲಿ: ಕರ್ನಾಟಕ ಆಡಳಿತ ಸೇವೆಯಿಂದ(ಕೆಎಎಸ್‌) ಭಾರತೀಯ ಆಡಳಿತ ಸೇವೆಗೆ (ಐಎಎಸ್‌) ಬಡ್ತಿ ನೀಡುವಂತೆ ಶಿಫಾರಸು ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಕಳುಹಿಸಿದ್ದ 56 ಅಧಿಕಾರಿಗಳ ಪಟ್ಟಿಯನ್ನು ತಾಂತ್ರಿಕ ಲೋಪದ ಕಾರಣ ಕೇಂದ್ರ ಲೋಕಸೇವಾ ಆಯೋಗ ವಾಪಸ್‌ ಕಳಿಸಿದೆ.

ರಾಜ್ಯ ಸರ್ಕಾರ 2014ನೇ ಸಾಲಿನಲ್ಲಿ ಬಡ್ತಿಗೆ ಅರ್ಹರಾದ ಅಧಿಕಾರಿಗಳನ್ನು ಬಿಟ್ಟು 2015ನೇ ಸಾಲಿನ ಬಡ್ತಿಗೆ ಅರ್ಹರಾದವರ  ಹೆಸರುಗಳನ್ನು ಕಳುಹಿಸಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ಆದರೆ, 2014ನೇ ಸಾಲಿನಲ್ಲಿ ಕೆಎಎಸ್‌ ಅಧಿಕಾರಿಯೊಬ್ಬರು ಕಡ್ಡಾಯ ನಿವೃತ್ತಿ ಪಡೆದಿರುವುದಕ್ಕೆ ಸಂಬಂಧಿಸಿದ ಟಿಪ್ಪಣಿಯನ್ನು ರಾಜ್ಯ ಸರ್ಕಾರ ಕಳುಹಿಸಿಲ್ಲ. ಇದರಿಂದಾಗಿ ಪಟ್ಟಿ ಹಿಂದಕ್ಕೆ ಬಂದಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ಖಚಿತಪಡಿಸಿವೆ.

ಅಕ್ರಮ ನೇಮಕಾತಿ ಆರೋಪಕ್ಕೆ ಒಳಗಾಗಿರುವ 36 ಕೆಎಎಸ್‌ ಅಧಿಕಾರಿಗಳ ಹೆಸರುಗಳೂ ರಾಜ್ಯ ಕಳುಹಿಸಿದ್ದ ಪಟ್ಟಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.