ADVERTISEMENT

ಒಂದೇ ಮನೆಯಲ್ಲಿ, 30 ಮಂದಿಯ ಗಣತಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 20:07 IST
Last Updated 24 ಏಪ್ರಿಲ್ 2015, 20:07 IST

ತಿಪಟೂರು: ಜಾತಿ ಜನಗಣತಿಗೆಂದು ಒಂದು ಮನೆಗೆ ಬಂದ ಗಣತಿದಾರರು ಚಾಪೆ ಹಾಸಿ ಕೂತವರು ಅರ್ಧ ದಿನ ಮೇಲೇಳಲಿಲ್ಲ. ಒಂದಾದ ಮೇಲೊಂದ ರಂತೆ ಮನೆ ಮಂದಿಯದ್ದೆಲ್ಲಾ ವಿವರ ತುಂಬುತ್ತಾ  ಕೊನೆಗೊಂಡಾಗ  ಮಂದಿಯ ಮಾಹಿತಿ ದಾಖಲಾಗಿತ್ತು.

ಒಂದೇ ಕುಟುಂಬದಲ್ಲಿ ಮೂವತ್ತು ಮಂದಿ ಇದ್ದ ಮನೆಯಲ್ಲಿ ಜಾತಿ ಜನಗಣತಿ ನಡೆದ ಅಪರೂಪದ ದೃಶ್ಯವಿದು. ತಾಲ್ಲೂಕಿನ ಹೊನ್ನವಳ್ಳಿ ಪಕ್ಕದ ಹನುಮಂತಪುರದ ಬಸವೇಗೌಡರ ಮನೆಯಲ್ಲಿ ಜಾತಿ ಜನಗಣತಿ ದೀರ್ಘ ಕಾಲ ನಡೆಯಿತು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಗಂಗಾಧರಪ್ಪ ಸೇರಿದಂತೆ ಮೂವತ್ತು ಜನರಿರುವ ಈ ಮನೆಯಲ್ಲಿ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತಿತರ ದಾಖಲೆ ಪಡೆದು ಗಣತಿದಾರರು ನಮೂನೆ ಭರ್ತಿ ಮಾಡಿಕೊಂಡರು. ಗಣತಿ ಕಾರ್ಯ ಮುಗಿಯುವ ಹೊತ್ತಿಗೆ ಅರ್ಧ ದಿನ ಸರಿದು ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.