ADVERTISEMENT

ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ನಿಧನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2016, 5:55 IST
Last Updated 24 ಏಪ್ರಿಲ್ 2016, 5:55 IST
ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ನಿಧನ
ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ನಿಧನ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.

ದೀರ್ಘಕಾಲದ ಅನಾರೋಗ್ಯ ನಿಮಿತ್ತ ಹಲವು ದಿನಗಳಿಂದ ಹಾಲಂಬಿ ಅವರು ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು. ಹಾಲಂಬಿ ಅವರಿಗೆ ಪತ್ನಿ ಸರೋಜಮ್ಮ ಹಾಗೂ ಇಬ್ಬರು ಪುತ್ರರು ಇದ್ದಾರೆ.

ಜಯನಗರದ ಏಳನೇ ಬ್ಲಾಕ್ ನಲ್ಲಿ ಇರುವ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗುವುದು.

ಅನಾರೋಗ್ಯ ನಿಮಿತ್ತ ಹಲವು ವರ್ಷಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಹಾಲಂಬಿ ಅವರು, ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ 24ನೇ ಅಧ್ಯಕ್ಷರಾಗಿ ಹಾಲಂಬಿ ಅವರು ಕಾರ್ಯ ನಿರ್ವಹಿಸಿದ್ದರು.

ಅಂತಿಮ ದರ್ಶನ
ಹಾಲಂಬಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಜಯನಗರದ ಏಳನೇ ಬ್ಲಾಕ್ ನಲ್ಲಿರುವ ಅವರ ನಿವಾಸದಲ್ಲಿ ಮಧ್ಯಾಹ್ನ 12ರವರೆಗೆ ಇರಿಸಲಾಗುವುದು. ಬಳಿಕ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿ 30ರಿಂದ 40 ನಿಮಿಷ ಇರಿಸಲಾಗುವುದು. ನಂತರ ಚಾಮರಾಜಪೇಟೆಯ ಹೋಟೆಲ್ ಉದ್ದಿಮೆದಾರರ ಸಹಕಾರ ಬ್ಯಾಂಕ್ ಆವರಣದಲ್ಲಿ 10ರಿಂದ 15 ನಿಮಿಷ ಅಂತಿಮ ದರ್ಶನಕ್ಕೆ ಇಡಲಾಗುವುದು. ಅಲ್ಲಿಂದ ಜಯನಗರದ ಏಳನೇ ಬ್ಲಾಕ್ ನಲ್ಲಿರುವ ಅವರ ನಿವಾಸಕ್ಕೆ ಮರಳಿ ತಂದು ಸಾಂಪ್ರದಾಯಿ ಕಾರ್ಯಗಳನ್ನು ನೆರವೇರಿಸಲಾಗುವುದು.

ಅಂತ್ಯ ಸಂಸ್ಕಾರ
ಸಾಂಪ್ರದಾಯಿಕ ಕಾರ್ಯಗಳು ಮುಗಿದ ಬಳಿಕ ಚಾಮರಾಜಪೇಟೆಯ ‘ಟಿ.ಆರ್. ಮಿಲ್’ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಹಾಲಂಬಿ ಅವರಿಗೆ ಸಂಬಂಧಪಟ್ಟ ಲೇಖನಗಳು

2015: ಪಲ್ಲಕ್ಕಿಯಲ್ಲಿ ಕೂರುವವರು ಪಲ್ಲಕ್ಕಿ ಹೊರುವಂತೆ ಮಾಡಿದ್ದೇನೆ - http://bit.ly/1UajYFt 
2012: ಕಸಾಪ ಚುನಾವಣೆ: ಪುಂಡಲೀಕ ಹಾಲಂಬಿಗೆ ಗೆಲುವು- http://bit.ly/1VuR7Nm 
2013: ಕನ್ನಡ ಕಲಿಕೆಗೆ ಆದ್ಯತೆ: ಸರ್ಕಾರಕ್ಕೆ ಪುಂಡಲೀಕ ಹಾಲಂಬಿ ಒತ್ತಾಯ- http://bit.ly/1VLggE4 
2015: ರಾಜ್ಯೋತ್ಸವ ಕಾರ್ಯಕ್ರಮ ವಾರವಷ್ಟೆ; ವ್ಯಾಪಕ ವಿರೋಧ- http://bit.ly/1T6s64Z 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.