ADVERTISEMENT

ಕೊಚ್ಚಿಹೋದ ತುಂಗಭದ್ರಾ ಕಾಲುವೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಸಿರವಾರ (ಕವಿತಾಳ):  ಸಮೀಪದ ನವಲಕಲ್‌ ಗ್ರಾಮದ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆಯ ಕಾಮಗಾರಿ ಪ್ರಗತಿಯಲ್ಲಿದ್ದ 89ನೇ ವಿತರಣಾ ಕಾಲುವೆಗೆ ನೀರು ಬಿಟ್ಟ ಕಾರಣ ಗುರುವಾರ ಕಾಲುವೆ ಕೊಚ್ಚಿ ಹೋಗಿದೆ.

ಕಾಲುವೆಗೆ ನೀರು ಬಿಡುವ ಕುರಿತ ಮಾಹಿತಿ ಇದ್ದರೂ ಕಾಮಗಾರಿ ಶೀಘ್ರ ಮುಗಿಸುವ ಕುರಿತು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕ್ರಮ ಕೈಗೊಂಡಿಲ್ಲ. ಕಾಮಗಾರಿ ಗುಣಮಟ್ಟ ಕಾಪಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೇಟ್‌ ಪಕ್ಕದಲ್ಲಿ ಕಾಲುವೆ ಕೊಚ್ಚಿ ಹೋಗಿದ್ದರಿಂದ ಇಡೀ ರಾತ್ರಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ. ಕಾಮಗಾರಿಗೆ ಬಳಸಿದ ಬಹುತೇಕ ಸಾಮಗ್ರಿಗಳು ಕೊಚ್ಚಿ ಹೋಗಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.