ADVERTISEMENT

ಗೋವಾ ಗಡಿ ಚೆಕ್ ಪೋಸ್ಟ್ ಬಳಿ ಕಂತೆ ಕಂತೆ ನಿಷೇಧಿತ ನೋಟು ವಶ: ಮೂವರು ಮಹಿಳೆಯರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 13:15 IST
Last Updated 22 ಏಪ್ರಿಲ್ 2017, 13:15 IST
ಗೋವಾ ಗಡಿ ಚೆಕ್ ಪೋಸ್ಟ್ ಬಳಿ ಕಂತೆ ಕಂತೆ ನಿಷೇಧಿತ ನೋಟು ವಶ: ಮೂವರು ಮಹಿಳೆಯರ ಬಂಧನ
ಗೋವಾ ಗಡಿ ಚೆಕ್ ಪೋಸ್ಟ್ ಬಳಿ ಕಂತೆ ಕಂತೆ ನಿಷೇಧಿತ ನೋಟು ವಶ: ಮೂವರು ಮಹಿಳೆಯರ ಬಂಧನ   

ಕಾರವಾರ: ಗೋವಾದಿಂದ ಮುಂಡಗೋಡಗೆ ಅಕ್ರಮವಾಗಿ ಸಾಗುತ್ತಿದ್ದ ಭಾರೀ ಮೌಲ್ಯದ ನಿಷೇಧಿತ ನೋಟನ್ನು ಇಲ್ಲಿನ ಗೋವಾ ಗಡಿಭಾಗದ ಮಾಜಾಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಗರ ಕವಚ ಅಣಕು ಕಾರ್ಯಾಚರಣೆ ವೇಳೆ ಬೆಳಕಿಗೆ ಪ್ರಕರಣ ಬೆಳಕಿಗೆ ಬಂದಿದೆ.

ಮೂವರು ಮಹಿಳೆಯರು ಹಣವನ್ನು ಮೂರು ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಚಿತ್ತಾಕುಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಮುಂಡಗೋಡ ಮೂಲದ ಡಾ.ಪ್ರಭು ಎಂಬುವರಿಗೆ ಸೇರಿದ ನಿಷೇಧಿತ ನೋಟುಗಳು ಇದಾಗಿದ್ದು, ಜಯಶ್ರೀ ಗೌಳಿ, ಭವಾನಿ ರಮೇಶ ನಾಯಕ, ಮೀನಾಕ್ಷಿ ನಾಯಕ ಎಂಬ ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.