ADVERTISEMENT

ಜನವರಿ ಅಂತ್ಯಕ್ಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮ; ಫೆಬ್ರುವರಿ ಅಂತ್ಯಕ್ಕೆ ಬಜೆಟ್ ಮಂಡನೆ- ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 14:09 IST
Last Updated 18 ನವೆಂಬರ್ 2017, 14:09 IST
ಜನವರಿ ಅಂತ್ಯಕ್ಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮ; ಫೆಬ್ರುವರಿ ಅಂತ್ಯಕ್ಕೆ ಬಜೆಟ್ ಮಂಡನೆ- ಸಿದ್ದರಾಮಯ್ಯ
ಜನವರಿ ಅಂತ್ಯಕ್ಕೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮ; ಫೆಬ್ರುವರಿ ಅಂತ್ಯಕ್ಕೆ ಬಜೆಟ್ ಮಂಡನೆ- ಸಿದ್ದರಾಮಯ್ಯ   

ದಾವಣಗೆರೆ: ‘ಮುಂಬರುವ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ ಅಂತ್ಯಕ್ಕೆ ಅಂತಿಮಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚನ್ನಗಿರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಅತ್ಯಂತ ದುರ್ಬಲ ಪಕ್ಷ. ಅವರು ಅಭ್ಯರ್ಥಿಗಳಿಗಾಗಿ ತಡಕಾಡುತ್ತಿದ್ದಾರೆ. ಬಿಜೆಪಿಯ ಸಾಕಷ್ಟು ಮುಖಂಡರು ನನ್ನ ಜತೆ  ಸಂಪರ್ಕದಲ್ಲಿದ್ದಾರೆ’ ಎಂದು ತಿಳಿಸಿದರು.

‘ವೈದ್ಯರು ತಪ್ಪು ಗ್ರಹಿಕೆಯಿಂದ ಮುಷ್ಕರ ನಡೆಸಿದ್ದರು. ಅವರೊಂದಿಗೆ ಸಮಾಲೋಚನೆ ನಡೆಸಿ ಆ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಸರ್ಕಾರ ಯೂನಿವರ್ಸಲ್ ಹೆಲ್ತ್ ಸ್ಕಿಂ ಅನ್ನು ಜಾರಿಗೊಳಿಸಲು ವೈದ್ಯರು ಒಪ್ಪಿಗೆ ನೀಡಿದ್ದಾರೆ. ಅದಕ್ಕೆ ದರ ನಿಗದಿಪಡಿಸುವುದು ಸರ್ಕಾರ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಫೆಬ್ರುವರಿ ಅಂತ್ಯಕ್ಕೆ ಬಜೆಟ್ ಮಂಡನೆ

‘ಫೆಬ್ರುವರಿ ಅಂತ್ಯಕ್ಕೆ ಬಜೆಟ್ ಮಂಡನೆ ಮಾಡಲಾಗುವುದು. ವಿಶ್ವ ಕನ್ನಡ ಸಮ್ಮೇಳನ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ, ಈ ಮಧ್ಯೆ ಕನ್ನಡ ಸಾಹಿತ್ಯ ಸಮ್ಮೇಳನ ಬಂದಿರುವುದರಿಂದ ತಡವಾಗಿದೆ. ಸಾಹಿತ್ಯ ಸಮ್ಮೇಳನ ಮುಗಿದ ಮೇಲೆ ವಿಶ್ವ ಕನ್ನಡ ಸಮ್ಮೇಳನದ ದಿನಾಂಕ ನಿಗದಿಪಡಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.