ADVERTISEMENT

ಜಿಗಜಿಣಗಿ ಹಿಂದಿ ಭಾಷಣಕ್ಕೆ ಪಾಪು ಕಿಡಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2017, 20:00 IST
Last Updated 19 ಫೆಬ್ರುವರಿ 2017, 20:00 IST

ಧಾರವಾಡ: ‘ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ರಾಯಚೂರಿನ ಸಭೆ ಯೊಂದರಲ್ಲಿ ಇತ್ತೀಚೆಗೆ ಪಾಲ್ಗೊಂಡು ಹಿಂದಿಯಲ್ಲಿ ಮಾತನಾಡಿದ್ದಾರೆ. ತಮಗೆ ಹಿಂದಿ ಬರುತ್ತದೆ ಎಂಬುದನ್ನು ಕನ್ನಡದ ನೆಲದಲ್ಲಿ ಪ್ರದರ್ಶಿಸುವ ಬದಲು ಕೇಂದ್ರದಲ್ಲಿ ಅದನ್ನು ಪ್ರದರ್ಶಿಸಬೇಕಾಗಿತ್ತು’ ಎಂದು ಡಾ. ಪಾಟೀಲ ಪುಟ್ಟಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಕರ್ನಾಟಕದಲ್ಲಿರುವ ಮುಸ್ಲಿಮರು ಕನ್ನಡದವರೇ ಹೊರತು ಹಿಂದಿಯವರಲ್ಲ. ದಕ್ಷಿಣ ಭಾರತದಲ್ಲಿರುವ ಮುಸ್ಲಿಮರು ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯಲ್ಲಿ ವ್ಯವಹರಿಸುತ್ತಾರೆಯೇ ಹೊರತು ಅರೆಬಿಕ್ ಭಾಷೆಯಲ್ಲಿ ಅಲ್ಲ. ಹಾಗೆಯೇ ತಮಿಳುನಾಡು, ಆಂಧ್ರ ಹಾಗೂ ಕೇರಳದಲ್ಲೂ ಅಲ್ಲಿನ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರೆ. ಯಾರೊಬ್ಬರೂ ಉರ್ದುವಿನಲ್ಲಿ ವ್ಯವಹರಿಸುವುದಿಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರವು ಕಪ್ಪತಗುಡ್ಡ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಕ್ಷಿತ ಅರಣ್ಯ ಎಂದು ಘೋಷಿಸಬೇಕು. ‘ಆಡೋಣ ಬಾ, ಕೆಡಿಸೋಣ ಬಾ’ ಎನ್ನುವ ಧೋರಣೆಗೆ ಅದು ಅಂಟಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.