ADVERTISEMENT

‘ಪರ್ಷಿಯಾ ಪರಿಮಳ’ ಕಾದಂಬರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 19:30 IST
Last Updated 3 ನವೆಂಬರ್ 2017, 19:30 IST
ಉಷಾ  ನರಸಿಂಹನ್
ಉಷಾ ನರಸಿಂಹನ್   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ‘ಎಚ್.ವಿ. ಸಾವಿತ್ರಮ್ಮ ಪ್ರಶಸ್ತಿ’ಗೆ ಮೈಸೂರಿನ ಉಷಾ ನರಸಿಂಹನ್ ಅವರ ‘‍‍ಪರ್ಷಿಯಾ ಪರಿಮಳ’ ಕಾದಂಬರಿ ಆಯ್ಕೆಯಾಗಿದೆ.

ಈ ಪ್ರಶಸ್ತಿ ₹ 25,000 ನಗದು, ಫಲಕ ಒಳಗೊಂಡಿದೆ.

2014, 15 ಮತ್ತು 16ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿತ್ತು. ಬಿ.ಟಿ. ಲಲಿತಾ ನಾಯಕ್, ಲಕ್ಷ್ಮಣ ಕೊಡಸೆ, ಸುಮಂಗಲ ಎಸ್. ಮುಮ್ಮುಗಟ್ಟಿ ಅವರಿದ್ದ ಆಯ್ಕೆ ಸಮಿತಿ ‘‍‍ಪರ್ಷಿಯಾ ಪರಿಮಳ’ ಕಾದಂಬರಿಯನ್ನು ಆಯ್ಕೆ ಮಾಡಿದೆ ಎಂದು ಸಂಘದ ಅಧ್ಯಕ್ಷೆ
ಡಾ. ವಸುಂಧರಾ ಭೂಪತಿ ತಿಳಿಸಿದ್ದಾರೆ.

ADVERTISEMENT

2017ನೇ ಸಾಲಿನ ‘ಇಂದಿರಾ ದತ್ತಿ ಪ್ರಶಸ್ತಿ’ಗೆ ತಮಿಳ್ ಸೆಲ್ವಿ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿ ₹ 3,000 ನಗದು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.