ADVERTISEMENT

ಪೂರ್ಣಾವಧಿ ಮುಖ್ಯಸ್ಥರಿಲ್ಲ

ಪಿಟಿಐ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ನವದೆಹಲಿ : ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ಪೂರ್ಣಾವಧಿ ಮುಖ್ಯಸ್ಥರ ಸ್ಥಾನ ಎರಡು ತಿಂಗಳುಗಳಿಂದ ಖಾಲಿ ಇದೆ.

ಕೆ. ದುರ್ಗಾ ಪ್ರಸಾದ್ ಅವರು ಸಿಆರ್‌ಪಿಎಫ್‌ನ ಮಹಾನಿರ್ದೇಶಕ (ಡಿಜಿ) ಹುದ್ದೆಯಿಂದ ನಿವೃತ್ತರಾದ ನಂತರ ಕೇಂದ್ರ ಗೃಹ ಸಚಿವಾಲಯವು ಹೆಚ್ಚುವರಿ ಡಿಜಿ ಸುದೀಪ್ ಲಾಖ್‌ಟಕಿಯಾ ಅವರಿಗೆ ಮಹಾನಿರ್ದೇಶಕರ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನಿಭಾಯಿಸುವಂತೆ ಫೆಬ್ರುವರಿ 28ರಂದು ಆದೇಶಿಸಿದೆ.

ಪೂರ್ಣಾವಧಿ ಮಹಾನಿರ್ದೇಶಕರ ನೇಮಕ ಶೀಘ್ರದಲ್ಲೇ ಆಗಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ಏನೂ ತಿಳಿದಿಲ್ಲ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.

ADVERTISEMENT

ಅರ್ಹ ಐಪಿಎಸ್‌ ಅಧಿಕಾರಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಮಹಾನಿರ್ದೇಶಕರ ಹುದ್ದೆಗೆ ಯಾರನ್ನು ನೇಮಿಸಬೇಕು ಎಂಬುದು ಅಂತಿಮಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಪೂರ್ಣಾವಧಿ ಮಹಾನಿರ್ದೇಶಕ ಇಲ್ಲದಿದ್ದರೆ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವುದು ಸಿಆರ್‌ಪಿಎಫ್‌ಗೆ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.