ADVERTISEMENT

ಪ್ರಸಾದ್‌ ಅತ್ತಾವರ್ ವಶಕ್ಕೆ; ವಿಚಾರಣೆ

ಪ್ರಚೋದನಾಕಾರಿ ಸಂದೇಶ ಪ್ರಕಟಣೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 10:09 IST
Last Updated 3 ಸೆಪ್ಟೆಂಬರ್ 2015, 10:09 IST

ಮಂಗಳೂರು: ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಸಂದೇಶ ಪ್ರಕಟಿಸಿದ ಆರೋಪದಡಿ ಭಜರಂಗ ದಳದ ಮುಖಂಡ ಪ್ರಸಾದ್ ಅತ್ತಾವರ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನಲ್ಲಿ ನಡೆದ ಪಬ್‌ ಮೇಲಿನ ದಾಳಿಯ ಪ್ರಕರಣದ ಆರೋಪಿಯೂ ಆಗಿರುವ ‌ಅತ್ತಾವರ್‌ನನ್ನು ಸದ್ಯ ಬಂದರು ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಅತ್ತಾವರ್ ಕಲಬುರ್ಗಿ ಹತ್ಯೆ ಪ್ರಕರಣದ ಶಂಕಿತ ಆರೋಪಿ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಅದಾಗ್ಯೂ, ಈ ಸಂಬಂಧ ಪೊಲೀಸರು ಖಚಿತಪಡಿಸಿಲ್ಲ.

ADVERTISEMENT

ಹೆಚ್ಚಿನ ಮಾಹಿತಿಯ ನಿರೀಕ್ಷೆಯಲ್ಲಿ.....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.