ADVERTISEMENT

ಫೆ. 10ರಂದು ಅಣ್ಣಿಗೇರಿಯಲ್ಲಿ ಪಂಪ ಉತ್ಸವ

​ಪ್ರಜಾವಾಣಿ ವಾರ್ತೆ
Published 13 ಜನವರಿ 2015, 19:30 IST
Last Updated 13 ಜನವರಿ 2015, 19:30 IST

ಧಾರವಾಡ: ‘ಇದೇ ಮೊದಲ ಬಾರಿಗೆ ಜಿಲ್ಲೆಯ ಅಣ್ಣಿಗೇರಿಯಲ್ಲಿ ಪಂಪ ಉತ್ಸವ ನಡೆ­ಸಲು ತೀರ್ಮಾನಿಸಲಾಗಿದ್ದು, ಸರ್ಕಾರ ₨ 15ಲಕ್ಷ ಅನುದಾನ ಬಿಡುಗಡೆ ಮಾಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

‘ಅಣ್ಣಿಗೇರಿಯ ಪಂಪ ಸ್ಮಾರಕ ಭವನದಲ್ಲಿ ಫೆಬ್ರುವರಿ 10ರಂದು ಉತ್ಸವ ನಡೆಸಲು ಸಿದ್ಧತೆ ನಡೆದಿದೆ. ಕಾರ್ಯಕ್ರಮಗಳ ಬಗ್ಗೆ ಸದ್ಯದಲ್ಲೇ ತಿಳಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

‘ಸಂಗೀತದ ತವರೂರು ಎಂದೆನಿಸಿಕೊಂಡಿರುವ ಧಾರವಾಡದಲ್ಲಿ ಪ್ರಸಕ್ತ ವರ್ಷದಿಂದ ಶಾಸ್ತ್ರೀಯ ಸಂಗೀತೋತ್ಸವ ನಡೆಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೆ  ಪ್ರತ್ಯೇಕವಾಗಿ ₨15ಲಕ್ಷ ಬಿಡುಗಡೆ ಮಾಡಿದೆ. ನವೀಕರಣಗೊಳ್ಳುತ್ತಿರುವ ಕಲಾಭವನ ಹಾಗೂ ಅಂಬೇಡ್ಕರ್ ಭವನಗಳು ಉದ್ಘಾಟನೆಯಾದ ನಂತರ ಸಂಗೀತೋತ್ಸವದ  ದಿನಾಂಕವನ್ನು ನಿಗದಿಪಡಿಸಲಾಗುವುದು’ ಎಂದು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.