ADVERTISEMENT

ಬಂದ್‌ಗೆ ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ

ರಾಷ್ಟ್ರವ್ಯಾಪ್ತಿ ಕಾರ್ಮಿಕ ಸಂಘಟನೆಗಳ ಮುಷ್ಕರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 6:14 IST
Last Updated 2 ಸೆಪ್ಟೆಂಬರ್ 2015, 6:14 IST

ಬೆಂಗಳೂರು: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ದೇಶ ವ್ಯಾಪಿ ಬಂದ್‌ಗೆ ರಾಜ್ಯದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜಧಾನಿ ಬೆಂಗಳೂರು, ಬಾಗಲಕೋಟೆ, ಶಿವಮೊಗ್ಗ, ರಾಯಚೂರು, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಬಂದ್ ಬಿಸಿ ತಟ್ಟಿದೆ.

ನೂತನ ಕಾರ್ಮಿಕ ನೀತಿ, ರಸ್ತೆ ಸುರಕ್ಷತಾ ಮಸೂದೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹತ್ತು ಕಾರ್ಮಿಕ ಸಂಘಟನೆಗಳು ಇಂದು ದೇಶ ವ್ಯಾಪಿ ಬಂದ್‌ಗೆ ಕರೆ ನೀಡಿವೆ.

ಮಿಶ್ರಪ್ರತಿಕ್ರಿಯೆ: ರಾಜಧಾನಿಯಲ್ಲಿ ಬಂದ್‌ಗೆ ಉತ್ತಮ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಪ್ರಮುಖ ಸಾರಿಗೆ ಸಂಪರ್ಕ ಸಾಧನವಾದ ಬಿಎಂಟಿಸಿಯ ಒಂದೇ ಒಂದು ಬಸ್‌ ರಸ್ತೆಗಳಿದಿಲ್ಲ. ಆದರೆ, ಆಟೊಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಳಿಗ್ಗೆ ಸುಮಾರು 10 ಗಂಟೆ ವರೆಗೆ ಜನ ಜೀವನ ಎಂದಿನಂತಿತ್ತು. ತಳ್ಳುಗಾಡಿಗಳಲ್ಲಿ ತಿಂಡಿಗೆ ಪೈಪೋಟಿ ಸಾಮಾನ್ಯವಾಗಿತ್ತು.

ಕಲ್ಲು ತೂರಾಟ: ಮೆಜೆಸ್ಟಿಕ್ ಸೇರಿದಂತೆ ನಗರದ ಕೆಲವೆಡೆ ದುಷ್ಕರ್ಮಿಗಳು ಬಸ್ಸುಗಳಿಗೆ ಕಲ್ಲು ತೂರಿದ್ದಾರೆ ಎಂದು ವರದಿಯಾಗಿದೆ.

ಸಂಚಾರ ದಟ್ಟಣೆ ತಪ್ಪಿಲ್ಲ!: ಬಂದ್‌ನಿಂದಾಗಿ ಸಂಚಾರ ದಟ್ಟಣೆ ಎಂದಿನಂತಿಲ್ಲವಾದರೂ ಟ್ರಾಫಿಕ್‌ ಸಮಸ್ಯೆ ಮಾತ್ರ ತಪ್ಪಿಲ್ಲ. ಬಸ್‌ಗಳು ರಸ್ತೆಗೆ ಇಳಿದಿಲ್ಲವಾದ್ದರಿಂದ ಜನರು ಸ್ವಂತ ವಾಹನಗಳನ್ನು ರಸ್ತೆಗಿಳಿಸಿದಂತಿತ್ತು.‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT