ADVERTISEMENT

ಬಳ್ಳಾರಿ: ದ್ಯಾಮವ್ವನ ಗುಡಿಯಲ್ಲಿ ಅವಷ್ಟಕ್ಕೆ ಅವೇ ಅಲ್ಲಾಡುತ್ತಿರುವ ಘಂಟೆಗಳು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 10:42 IST
Last Updated 10 ಮಾರ್ಚ್ 2017, 10:42 IST
ಬಳ್ಳಾರಿ: ದ್ಯಾಮವ್ವನ ಗುಡಿಯಲ್ಲಿ ಅವಷ್ಟಕ್ಕೆ ಅವೇ ಅಲ್ಲಾಡುತ್ತಿರುವ  ಘಂಟೆಗಳು
ಬಳ್ಳಾರಿ: ದ್ಯಾಮವ್ವನ ಗುಡಿಯಲ್ಲಿ ಅವಷ್ಟಕ್ಕೆ ಅವೇ ಅಲ್ಲಾಡುತ್ತಿರುವ ಘಂಟೆಗಳು   

ಬಳ್ಳಾರಿ: ಇಲ್ಲಿನ ಜಾಲಿಬೆಂಚಿ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ  ದ್ಯಾಮವ್ವನ ಗುಡಿಯಲ್ಲಿ ಘಂಟೆಗಳು ಅವಷ್ಟಕ್ಕೆ ಅವೇ ಅಲ್ಲಾಡುತ್ತಿರುವ ವಿಸ್ಮಯ ಘಟನೆ ವರದಿಯಾಗಿದೆ.

ರಾತ್ರಿ ಹೊತ್ತು ದೇವಸ್ಥಾನದ ಮೇಲ್ಛಾವಣಿಗೆ ಹಾಕಿರುವ ಘಂಟೆಗಳು ಗಾಳಿ ಇಲ್ಲದಿದ್ದರು ತೂಗಾಡುತ್ತಿರುತ್ತವೆ. ಘಂಟೆಯ ನಾದ ಕೇಳಿದ ಕೂಡಲೇ  ಜನರು ಹೋಗಿ ನೋಡಿದಾಗ ಘಂಟೆಗಳು ತೂಗುತ್ತಿರುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದು ದ್ಯಾಮವ್ವ ದೇವಿಯ ಪವಾಡ ಎಂದು ಆ ಭಾಗದ ಜನರು ವಿಸ್ಮಯಗೊಂಡಿದ್ದಾರೆ.

ADVERTISEMENT

ಈ ಘಟನೆ ನಡೆದ ಬಳಿಕ ದೇವಿಯ ದರ್ಶನ ಪಡೆಯಲು ನೂರಾರು ಭಕ್ತರು ಜಾಲಿಬೆಂಚಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.