ADVERTISEMENT

ಬಿಪಿಎಲ್‌ ಕಾರ್ಡ್‌ ಅಕ್ಕಿ ಪ್ರಮಾಣ 8ಕೆ.ಜಿ. ವರೆಗೆ ಏರಿಕೆ: ಸಿಎಂ ಸಿದ್ದರಾಮಯ್ಯ

ಗ್ಯಾಸ್‌ ಸಂಪರ್ಕ ಇದ್ದವರಿಗೂ ಸೀಮೆಎಣ್ಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 10:44 IST
Last Updated 8 ಫೆಬ್ರುವರಿ 2017, 10:44 IST
ಬಿಪಿಎಲ್‌ ಕಾರ್ಡ್‌ ಅಕ್ಕಿ ಪ್ರಮಾಣ 8ಕೆ.ಜಿ. ವರೆಗೆ ಏರಿಕೆ: ಸಿಎಂ ಸಿದ್ದರಾಮಯ್ಯ
ಬಿಪಿಎಲ್‌ ಕಾರ್ಡ್‌ ಅಕ್ಕಿ ಪ್ರಮಾಣ 8ಕೆ.ಜಿ. ವರೆಗೆ ಏರಿಕೆ: ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುತ್ತಿರುವ ಅಕ್ಕಿ ಪ್ರಮಾಣ ಯೂನಿಟ್ ಗೆ 8 ಕೆ.ಜಿ. ವರೆಗೆ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.        

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು.

ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುತ್ತಿರುವ ಅಕ್ಕಿ ಪ್ರಮಾಣ ಯೂನಿಟ್ ಗೆ 8 ಕೆ.ಜಿ. ವರೆಗೆ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಏಪ್ರಿಲ್ ನಿಂದ ಅಕ್ಕಿ ಪ್ರಮಾಣ ಏರಿಕೆ ಜಾರಿಯಾಗಲಿದೆ.

ADVERTISEMENT

ಕ್ಷೀರಭಾಗ್ಯ ಯೋಜನೆಯಲ್ಲಿ ಶಾಲಾ ಮಕ್ಕಳಿಗೆ 5 ದಿನ ಹಾಲು ವಿತರಿಸಲು ತೀರ್ಮಾನಿಸಲಾಗಿದೆ. ಆಧಾರ್ ಲಿಂಕ್ ಮಾಡಿಕೊಳ್ಳದ ಬಿಪಿಎಲ್ ಕಾರ್ಡ್ ದಾರರಿಗೆ ಎರಡು ತಿಂಗಳವರೆಗೆ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತದೆ ಎಂದರು.

ಗ್ಯಾಸ್ ಸಂಪರ್ಕ ಇದ್ದವರಿಗೂ ಸೀಮೆಎಣ್ಣೆ ನೀಡಲು ನಿರ್ಧಾರಿಸಲಾಗಿದೆ ಎಂದು ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಇದರೊಂದಿಗೆ ಬರ ಪರಿಹಾರ ಕಾಮಗಾರಿಗಳ ಬಗ್ಗೆಯೂ ಚರ್ಚೆ ನಡೆಯಿತು. ಬರಪರಿಹಾರ ಕಾಮಗಾರಿಗಳು ಅಸಮರ್ಪಕ ಎಂದು ಶಾಸಕರು ಅತೃಪ್ತಿ ವ್ಯಕ್ತಪಡಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಲಾದ ಬೋರ್ವೆಲ್ ಗಳಿಗೆ ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಅಸಮಾಧಾನ  ಹೊರಹಾಕಿದರು.                   

ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಶೇ.50 ರಷ್ಟು ಶಾಸಕರು ಗೈರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.