ADVERTISEMENT

ಮಾಜಿ ಸಚಿವೆ ಚಂದ್ರಪ್ರಭಾ ಅರಸು ನಿಧನ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಮಾಜಿ ಸಚಿವೆ ಚಂದ್ರಪ್ರಭಾ ಅರಸು ನಿಧನ
ಮಾಜಿ ಸಚಿವೆ ಚಂದ್ರಪ್ರಭಾ ಅರಸು ನಿಧನ   

ಮೈಸೂರು: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಪುತ್ರಿ, ಮಾಜಿ ಸಚಿವೆ ಚಂದ್ರಪ್ರಭಾ ಅರಸು (70) ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ಪುತ್ರ, ಪುತ್ರಿ ಹಾಗೂ ಸೋದರಿ ಭಾರತಿ ಇದ್ದಾರೆ.

ಅವರ ಹುಟ್ಟೂರಾದ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ಅಂತ್ಯಸಂಸ್ಕಾರ ನೆರವೇರಲಿದೆ. ಬೆಂಗಳೂರಿನಲ್ಲಿ ಬಿ.ಎಸ್ಸಿ ಪದವಿ ಪಡೆದ ಅವರು, 1967ರಲ್ಲಿ ಮೋಹನಚೆಲುವೆ ಅರಸು ಅವರನ್ನು  ಮದುವೆಯಾದ ಮೇಲೆ ಮೈಸೂರಿನಲ್ಲಿ ನೆಲೆಸಿದ್ದರು. ತಂದೆ ಕಟ್ಟಿದ್ದ ಕ್ರಾಂತಿರಂಗ ಪಕ್ಷದ ಮೂಲಕ ಹುಣಸೂರು ಕ್ಷೇತ್ರ ದಿಂದ 1983ರಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.

1984ರಲ್ಲಿ ಕಾಂಗ್ರೆಸ್‌ ಸೇರಿದರು. 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರ ದಿಂದ ಪರಾಭವಗೊಂಡರು.

ಮತ್ತೆ 1989ರಲ್ಲಿ ಶಾಸಕರಾಗಿ ಚುನಾಯಿ ತರಾದರು. ಸಮಾಜ ಕಲ್ಯಾಣ, ಅಬಕಾರಿ ಹಾಗೂ ರೇಷ್ಮೆ ಸಚಿವೆಯಾಗಿದ್ದರು. 

1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಸಂಸತ್‌ ಪ್ರವೇಶಿಸಿದರು. 2008ರಲ್ಲಿ ಹುಣಸೂರಿಗೆ ತೆರಳುತ್ತಿದ್ದಾಗ ಸಂಭವಿ ಸಿದ ಅಪಘಾತದಲ್ಲಿ ಅವರ ಎರಡೂ ಕಾಲುಗಳಿಗೆ ತೀವ್ರ ಪೆಟ್ಟಾಗಿತ್ತು. ನಂತರ ಹೆಚ್ಚು ಓಡಾಡುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.