ADVERTISEMENT

ಮೂಲವ್ಯಾಧಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಂತೆ!

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:51 IST
Last Updated 23 ಮಾರ್ಚ್ 2017, 19:51 IST

ಬೆಂಗಳೂರು: ‘ನೋಟು ರದ್ದತಿಯಿಂದ ಹಣ ಕಳೆದುಕೊಂಡವರ ಸ್ಥಿತಿ ಮೂಲವ್ಯಾಧಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಂತೆ ಆಗಿದೆ’ ಎಂದು ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ ಮಾಡಿದರು.

ವಿಧಾನ ಪರಿಷತ್ತಿನಲ್ಲಿ ಬಜೆಟ್‌ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಕೈಗೆ, ಕಾಲಿಗೆ, ಹೃದಯಕ್ಕೆ ಶಸ್ತ್ರಚಿಕಿತ್ಸೆ ಆದರೆ ಬಹಿರಂಗವಾಗಿ ಹೇಳಿಕೊಳ್ಳಬಹುದು. ಮೂಲವ್ಯಾಧಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ ಯಾರಿಗೂ ಹೇಳಿಕೊಳ್ಳಲು ಆಗುವುದಿಲ್ಲ, ಸಮಾಧಾನವಾಗಿ ಕುಳಿತುಕೊಳ್ಳಲೂ ಆಗುವುದಿಲ್ಲ’ ಎಂದು ಹಾಸ್ಯ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಜಿ.ಪರಮೇಶ್ವರ್, ‘ನೋಟು ರದ್ದತಿಯಿಂದ ಅನೇಕರಿಗೆ ಸಮಸ್ಯೆಯಾಗಿದೆ. ದೇಶ–ವಿದೇಶದ ಅನೇಕ ಆರ್ಥಿಕ ತಜ್ಞರು ಇದನ್ನು ವಿರೋಧಿಸಿದ್ದಾರೆ. ಇದರಿಂದ ದೇಶದ ಜಿಡಿಪಿ ಶೇ 2ಕ್ಕೆ ಕುಸಿಯಲಿದೆ ಎಂದು ಎಚ್ಚರಿಸಿದ್ದಾರೆ’ ಎಂದರು. ಕಾಂಗ್ರೆಸ್‌ನ ವಿ.ಎಸ್.  ಉಗ್ರಪ್ಪ, ಎಚ್‌.ಎಂ. ರೇವಣ್ಣ, ಎನ್‌. ಎಸ್‌. ಬೋಸರಾಜ್‌ ಇದನ್ನು ವಿರೋ ಧಿಸಿ, ‘ಉತ್ತರ ಪ್ರದೇಶದಲ್ಲಿ ಆಂಬ್ಯುಲೆ ನ್ಸ್‌ನಲ್ಲಿ ಹಣ ಸರಬರಾಜು ಆಗಿದೆ. ಎಲ್ಲ ಚುನಾವಣೆಗಳನ್ನು ನೀವು ಹೇಗೆ ಗೆದ್ದಿ ದ್ದೀರಿ ಎಂದು ಗೊತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.