ADVERTISEMENT

ರಾಜಕೀಯ ಮರುಪ್ರವೇಶ ನಿರ್ಧಾರ ಪ್ರಕಟಿಸಿದ ಮಾಜಿ ಸಚಿವ ಆನಂದ ಅಸ್ನೋಟಿಕರ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 7:04 IST
Last Updated 12 ನವೆಂಬರ್ 2017, 7:04 IST
ಅಸ್ನೋಟಿಕರ್‌ ರಾಜಕೀಯ ಮರುಪ್ರವೇಶಕ್ಕೆ ಆಗ್ರಹಿಸಿ ಅವರ ಮನೆ ಮುಂದೆ ಜಮಾಯಿಸಿದ್ದ ಬೆಂಬಲಿಗರು
ಅಸ್ನೋಟಿಕರ್‌ ರಾಜಕೀಯ ಮರುಪ್ರವೇಶಕ್ಕೆ ಆಗ್ರಹಿಸಿ ಅವರ ಮನೆ ಮುಂದೆ ಜಮಾಯಿಸಿದ್ದ ಬೆಂಬಲಿಗರು   

ಕಾರವಾರ: ಅಂಕೋಲಾ - ಕಾರವಾರ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೆ ರಾಜಕಾರಣಕ್ಕೆ ಬರುವೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಇಲ್ಲಿ ನಿರ್ಧಾರ ಪ್ರಕಟಿಸಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ಪಕ್ಷದ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕಳೆದ ಚುನಾವಣೆಯಲ್ಲಿ 36 ಸಾವಿರ ಮತಗಳಿಂದ ಸೋಲು ಕಂಡಿದ್ದೆ. ನಾನು ಮಾಡಿದ ಕೆಲವು ತಪ್ಪುಗಳು ಈ ಫಲಿತಾಂಶಕ್ಕೆ ಕಾರಣವಾಗಿತ್ತು. ನನ್ನ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಇದನ್ನು ಮನಗಂಡ ಕ್ಷೇತ್ರದ ಜನರು ಮತ್ತೆ ರಾಜಕಾರಣಕ್ಕೆ ಬರಬೇಕೆಂದು ಜನರು ಒತ್ತಡ ಹಾಕುತ್ತಿದ್ದಾರೆ. ನವೆಂಬರ್ 15ರ ನಂತರ ಕ್ಷೇತ್ರದಲ್ಲಿ ಸಂಚರಿಸಿ, ಹಿರಿಯರ ಸಲಹೆಗಳನ್ನು ಪಡೆದು ಮುಂದುವರಿಯುವೆ ಎಂದರು.

ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ಯುವಕರಿಗೆ ಉದ್ಯೋಗ ಹಾಗೂ ರಾಜ್ಯದಲ್ಲಿಯೇ ಈ ಕ್ಷೇತ್ರವನ್ನು ಮಾದರಿ ಮಾಡುವ ಗುರಿ ಇದೆ ಎಂದು ಅವರು ಹೇಳಿದರು.

ADVERTISEMENT

ಇದಕ್ಕೂ ಮುನ್ನ, ಅಸ್ನೋಟಿಕರ್‌ ರಾಜಕೀಯ ಮರುಪ್ರವೇಶಕ್ಕೆ ಆಗ್ರಹಿಸಿ ಅಪಾರ ಸಂಖ್ಯೆಯ ಬೆಂಬಲಿಗರು ಭಾನುವಾರ ಅಸ್ನೋಟಿಕರ್‌ ಅವರ ಮನೆ ಮುಂದೆ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.