ADVERTISEMENT

ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಎ.ರಾಜಮ್ಮ ಕೇಶವಮೂರ್ತಿ ಅವರಿಗೆ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:53 IST
Last Updated 21 ಸೆಪ್ಟೆಂಬರ್ 2017, 19:53 IST
ಮೈಸೂರು ಅರಮನೆ ಎದುರಿನ ವೇದಿಕೆಯಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದುಷಿ ಎ.ರಾಜಮ್ಮ ಕೇಶವಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಿದಾಗ ರಾಜಮ್ಮ ಸಿದ್ದರಾಮಯ್ಯ ಅವರನ್ನು ಹರಸಿದರು. ಮೇಯರ್ ಎಂ.ಜೆ.ರವಿಕುಮಾರ್, ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಸಚಿವ ಡಾ.ಎಚ್.ಸಿ.

ಮೈಸೂರು: ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಮೌಲ್ಯವನ್ನು ₹ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅರಮನೆ ಎದುರಿನ ವೇದಿಕೆಯಲ್ಲಿ ಗುರುವಾರ ವಿದುಷಿ ಎ.ರಾಜಮ್ಮ ಕೇಶವಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಈವರೆಗೆ ₹ 3 ಲಕ್ಷವನ್ನು ಪ್ರಶಸ್ತಿ ಜತೆ ನೀಡಲಾಗುತ್ತಿತ್ತು. ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಿದ ಬಳಿಕ ಪ್ರಶಸ್ತಿ ಮೌಲ್ಯವನ್ನು  ಹೆಚ್ಚಿಸಲಾಗಿದೆ ಎಂದು ಹೇಳಿದರು.

ADVERTISEMENT

ಶಿಫಾರಸು ಇಲ್ಲದೇ ಪ್ರಶಸ್ತಿ– ರಾಜಮ್ಮ
‘ಯಾವುದೇ ಶಿಫಾರಸು ಇಲ್ಲದೇ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ. ಇದು ದೇಶಕ್ಕೆ ಮಾದರಿ’ ಎಂದು ವಿದುಷಿ ಎ.ರಾಜಮ್ಮ ಕೇಶವಮೂರ್ತಿ ತಿಳಿಸಿದರು.

‘ಸಾಮಾನ್ಯವಾಗಿ ಶಿಫಾರಸು ಇಲ್ಲದಿದ್ದರೆ ಯಾವ ಪ್ರಶಸ್ತಿಯೂ ಸಿಗುವುದಿಲ್ಲ ಎಂಬ ಮಾತಿದೆ. ಬಹಳಷ್ಟು ಪ್ರಶಸ್ತಿಗಳ ಕಥೆಯೂ ಇದೇ ಆಗಿದೆ. ಆದರೆ, ರಾಜ್ಯ ಸರ್ಕಾರ ಈ ಪ್ರಶಸ್ತಿ ಆಯ್ಕೆಗೆ ಶಿಫಾರಸನ್ನು ಮಾನದಂಡವಾಗಿ ಪರಿಗಣಿಸದೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಎಲ್ಲ ಪ್ರಶಸ್ತಿಗಳ ಆಯ್ಕೆಗೂ ಇದೇ ಮಾನದಂಡ ಅನುಸರಿಸಬೇಕು’ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.