ADVERTISEMENT

ರಾಹುಲ್ ಯಾತ್ರೆಯಲ್ಲಿ ಮೊಳಗಿದ ‘ಮೋದಿ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 12:12 IST
Last Updated 26 ಏಪ್ರಿಲ್ 2018, 12:12 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಹೊನ್ನಾವರ: ನಗರದಲ್ಲಿ ಗುರುವಾರ ನಡೆದ ಜನಾಶೀರ್ವಾದ ಯಾತ್ರೆಯನ್ನು ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾತನಾಡುತ್ತಿದ್ದ ವೇಳೆ ಯುವಕರು ‘ಮೋದಿ...ಮೋದಿ..’ ಎಂದು ಘೋಷಣೆ ಕೂಗಿದರು.

ಹೊನ್ನಾವರದ ಶರಾವತಿ ವೃತ್ತದಲ್ಲಿ ರಾಹುಲ್ ಭಾಷಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸುಮಾರು 100 ಮೀ ದೂರದಲ್ಲಿದ್ದ ಯುವಕರ ಗುಂಪು ‘ಮೋದಿ.. ಮೋದಿ..’ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪು ‘ರಾಹುಲ್.. ರಾಹುಲ್..’ ಎಂದು ಕೂಗಿದರು.

ಸುಮಾರು 10 ನಿಮಿಷ ಭಾಷಣದ ಬಳಿಕ ರಾಹುಲ್ ತಮ್ಮ ಭಾಷಣವನ್ನು ಮೊಟಕುಗೊಳಿಸಿ ಭಟ್ಕಳದತ್ತ ಹೊರಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.