ADVERTISEMENT

ವಿಜ್ಞಾನಿಗಳ ಮಧ್ಯೆ ಸಹಕಾರ ಹೆಚ್ಚಲಿ

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಬೆಂಗಳೂರು: ಕಾಮನ್‌ವೆಲ್ತ್‌ ದೇಶಗಳ ಯುವ ವಿಜ್ಞಾನಿಗಳ ನಡುವೆ ಸಹಕಾರ ಹೆಚ್ಚಬೇಕು. ಹಾಗೆಯೇ, ಜಗತ್ತಿನ ಮುಂಚೂಣಿ ಪ್ರಯೋಗಾಲಯಗಳ ವಿಜ್ಞಾನಿಗಳ ನಡುವಿನ ಕೊಡು–ಕೊಳ್ಳುವಿಕೆ ಕೂಡ ಹೆಚ್ಚಾಗಬೇಕು ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಆಶಯ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಕಾಮನ್‌ವೆಲ್ತ್‌ ದೇಶಗಳ ವಿಜ್ಞಾನಿಗಳ ಸಮ್ಮೇಳನ ಉದ್ಘಾಟಿಸಿದ ಅವರು, ‘ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಸ್ಪಷ್ಟ ಕಾರ್ಯ ಕ್ರಮಗಳನ್ನು ರೂಪಿಸಿದರೆ, ಈ ಸಮ್ಮೇಳನ ನಮ್ಮ ಭವಿಷ್ಯ ಬದಲಾ ಯಿಸುವ ಶಕ್ತಿ ಪಡೆಯಲಿದೆ’ ಎಂದು ಪ್ರತಿಪಾದಿಸಿದರು.

ಇಂಗ್ಲೆಂಡ್‌ನ ದಿ ರಾಯಲ್‌ ಸೊಸೈಟಿ ಆಯೋ ಜಿಸಿರುವ ನಾಲ್ಕು ದಿನಗಳ ಈ ಸಮ್ಮೇಳನಕ್ಕೆ ಕೇಂದ್ರ ಸರ್ಕಾರ ಮತ್ತು ಬೆಂಗಳೂರಿನ ಜವಾಹ ರಲಾಲ್‌ ನೆಹರೂ ಉನ್ನತ ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ (ಜೆಎನ್‌ಸಿಎಎಸ್‌ಆರ್‌) ಸಹಯೋಗ ನೀಡಿವೆ.

ಶಿಕ್ಷಕ ಮತ್ತು ಶಿಕ್ಷಣದ ಗುಣಮ ಟ್ಟವನ್ನು ಎಲ್ಲ ಹಂತಗಳಲ್ಲಿ ಇನ್ನಷ್ಟು ಉತ್ತಮಪಡಿಸುವ ಅವಶ್ಯಕತೆ ಇದೆ. ಅದರಲ್ಲೂ ವಿಶೇಷವಾಗಿ ಶಾಲಾ ಹಂತದಲ್ಲಿ ಈ ಕೆಲಸ ಆಗಬೇಕು. ಯುವ ಜನರನ್ನು ವಿಜ್ಞಾನದತ್ತ ಸೆಳೆ ಯುವುದು, ಆ ಕ್ಷೇತ್ರದಲ್ಲಿ ಅವರು ಬದುಕು ಕಂಡು ಕೊಳ್ಳುವಂತೆ ಮಾಡು ವುದು ಅಭಿವೃದ್ಧಿ ಹೊಂದು ತ್ತಿರುವ ರಾಷ್ಟ್ರಗಳಿಗೆ ಸವಾಲಾಗಿದೆ ಎಂದು ರಾಷ್ಟ್ರಪತಿ  ಉಲ್ಲೇಖಿಸಿದರು.

ಸ್ವಾಗತ ಭಾಷಣ ಮಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್‌, ‘ಸಂಕುಚಿತ ದೃಷ್ಠಿಕೋನದ ರಾಷ್ಟ್ರೀಯತೆಯನ್ನು ವಿಜ್ಞಾನವು ಅಪ್ರಸ್ತುತಗೊಳಿಸಲಿ’ ಎಂದು ಹೇಳಿದರು.

ವಿಜ್ಞಾನಿಗಳು ನಡೆಸುವ ಕಾರ್ಯ ಗಳಲ್ಲಿ ಸಾರ್ವ ಜನಿಕರು ಭರವಸೆ ಇಡುವಂತಹ ವಾತಾವರಣ ಇರಬೇಕು. ಆದರೆ ಈಚಿನ ಕೆಲವು ಬೆಳವಣಿಗೆ ಆ ವಿಶ್ವಾಸಕ್ಕೆ ಕುಂದು ತರುವಂತಿವೆ ಎಂದು ದಿ ರಾಯಲ್‌ ಸೊಸೈಟಿ ಅಧ್ಯಕ್ಷ ಸರ್‌ ಪಾಲ್‌ ನರ್ಸ್‌ ಆತಂಕ ವ್ಯಕ್ತಪಡಿಸಿದರು.

ಮನುಕುಲ ಇರುವವರೆಗೆ ವಿಜ್ಞಾನ ಇರುತ್ತದೆ. ವಿಜ್ಞಾನದ ಅರಿವು ವಿಶ್ವ ಶಾಂತಿಗೆ ಕಾಲಕ್ರಮೇಣ ನೆರವಾಗುತ್ತದೆ ಎಂದು ಜೆಎನ್‌ಸಿಎಎಸ್‌ಆರ್‌ ಗೌರ ವಾಧ್ಯಕ್ಷ ಪ್ರೊ.ಸಿ.ಎನ್‌.ಆರ್‌. ರಾವ್‌ ಹೇಳಿದರು. ಮುಖ್ಯಮಂತ್ರಿ ಸಿದ್ದರಾ ಮಯ್ಯ, ರಾಜ್ಯಪಾಲ ವಜುಭಾಯಿ ವಾಲಾ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.