ADVERTISEMENT

ಶಿಂಷಾ:ಕಬ್ಬಿನ ಗದ್ದೆಗೆ ಕಾಡಾನೆಗಳ ದಾಳಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST
ಮದ್ದೂರು ತಾಲ್ಲೂಕು ತೊರೆಶೆಟ್ಟಹಳ್ಳಿ ಬಳಿ ಶಿಂಷಾ ನದಿಯ ಬದಿಯ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿರುವ ಆನೆಗಳ ಹಿಂಡು
ಮದ್ದೂರು ತಾಲ್ಲೂಕು ತೊರೆಶೆಟ್ಟಹಳ್ಳಿ ಬಳಿ ಶಿಂಷಾ ನದಿಯ ಬದಿಯ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿರುವ ಆನೆಗಳ ಹಿಂಡು   

ಮದ್ದೂರು: ಇಲ್ಲಿಗೆ ಸಮೀಪದ ತೊರೆ ಶೆಟ್ಟಹಳ್ಳಿ ಹಾಗೂ ಬೆಟ್ಟದಾಸನ ದೊಡ್ಡಿಯ ಬಳಿ 6 ಆನೆಗಳು ಭಾನು ವಾರ ಬೆಳಿಗ್ಗೆ ಪ್ರತ್ಯಕ್ಷವಾಗಿದ್ದು, ಶಿಂಷಾ ನದಿ ದಂಡೆಯ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿವೆ.  ಆನೆಗಳು ದೂರದ ಸಾವನದುರ್ಗ ಅರಣ್ಯ ಪ್ರದೇಶದಿಂದ ಶಿಂಷಾ ನದಿಯ ಮೂಲಕ ಆಹಾರ ಅರಸುತ್ತ ಬಂದಿವೆ. 

ತೊರೆಶೆಟ್ಟಹಳ್ಳಿ, ಬೆಟ್ಟದಾಸನದೊಡ್ಡಿ ಹಾಗೂ ಮುದಿಗೆರೆ ಗ್ರಾಮದ ರೈತರಾದ ಪಿಡ್ಡೇಗೌಡ, ನಾಗರಾಜು, ಚಿಕ್ಕೋನು, ಪ್ರಭು, ನಾಗೇಶ್, ರವಿ ಅವರನ್ನು ಒಳಗೊಂಡಂತೆ ರೈತರ 6 ಎಕರೆಗೂ ಹೆಚ್ಚು ಕಬ್ಬಿನ ಗದ್ದೆಯನ್ನು ತುಳಿದು ಬೆಳೆ ನಾಶಪಡಿಸಿವೆ. ಆನೆಗಳು ಬೀಡು ಬಿಟ್ಟಿರುವ ಸುದ್ದಿ ತಿಳಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿ. ನಾಗೇಗೌಡ ಕೂಡಲೇ ಅರಣ್ಯಾ ಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು.

ಅದರಂತೆ, ಇದೀಗ ಸ್ಥಳಕ್ಕೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ ನಟನೀಕರ್, ಉಪ ಸಂರಕ್ಷಣಾ ಧಿಕಾ ರಿಗಳಾದ ನಾಗರಾಜು, ನರಸಿಂಹಯ್ಯ, ವನ್ಯಜೀವಿ ವಿಭಾಗದ ಅಧಿಕಾರಿ ಶಿವಣ್ಣ, ವಲಯ ಅರಣ್ಯಾಧಿಕಾರಿ ಡಾ.ಶಶಿಧರ್‌ ಅವರು 25ಕ್ಕೂ ಹೆಚ್ಚು ಸಿಬ್ಬಂದಿ ಯೊಂದಿಗೆ ಸ್ಥಳಕ್ಕೆ ಬಂದಿದ್ದರಾರೆ. ಆನೆಗಳನ್ನು ಓಡಿಸಲು ಪಟಾಕಿ, ತಮಟೆ ಹಾಗೂ ಮುಂಜಾಗರೂಕತೆ ಕ್ರಮವಾಗಿ ಅರಿವಳಿಕೆ ಚುಚ್ಚುಮದ್ದು ಹಾಗೂ ಇನ್ನಿತರ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಸಂಜೆ 6 ಗಂಟೆ ಬಳಿಕ ಆನೆಗಳನ್ನು ಚನ್ನಪಟ್ಟಣ ವ್ಯಾಪ್ತಿಯ ಮಾಕಳಿ ಅರಣ್ಯ ಪ್ರದೇಶಕ್ಕೆ ಅಟ್ಟುವುದಾಗಿ ಅರಣ್ಯ ವಲ ಯಾಧಿಕಾರಿ ಡಾ.ಶಶಿಧರ್‌ ‘ಪ್ರಜಾ ವಾಣಿ’ಗೆ ತಿಳಿಸಿದರು.

ಜನ ಜಾತ್ರೆ: ತಮ್ಮ ಗ್ರಾಮದ ಹೊರವಲಯದಲ್ಲಿ ಅನೆಗಳು ಬೀಡು ಬಿಟ್ಟಿರುವ ಸುದ್ದಿ ತಿಳಿದು ಸುತ್ತ ಮುತ್ತ ಲಿನ ಗ್ರಾಮಗಳಿಂದ ಜನರು ತಂಡೋ ಪತಂಡವಾಗಿ ಬಂದು ಆನೆಗಳನ್ನು ಕುತೂಹಲದಿಂದ ವೀಕ್ಷಿಸಿದರು. ಸ್ಥಳದಲ್ಲಿ ಜನರ ಜಾತ್ರೆಯೇ ನೆರೆದಿದ್ದು, ಆನೆಗಳ ಬಳಿಗೆ ಜನರು ಹೋಗದಂತೆ ಕೆಸ್ತೂರು ಪಿಎಸ್‌ಐ  ಮಹೇಶ್‌ ಹಾಗೂ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.