ADVERTISEMENT

ಸಚಿವೆ ಉಮಾಶ್ರೀಗೆ ಮುಂದುವರಿದ ಚಿಕಿತ್ಸೆ; ವಿಶ್ರಾಂತಿಗೆ ವೈದ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 8:46 IST
Last Updated 28 ಫೆಬ್ರುವರಿ 2017, 8:46 IST
ಉಮಾಶ್ರೀ ಅವರಿಗೆ ಮಂಗಳವಾರ ಚಿಕಿತ್ಸೆ ನೀಡುತ್ತಿರುವ ಕೊಠಡಿ. ಹುನಗುಂದ ತಾಲ್ಲೂಕು ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಪಡೆದ ಉಮಾಶ್ರೀ(ಒಳ ಚಿತ್ರ)
ಉಮಾಶ್ರೀ ಅವರಿಗೆ ಮಂಗಳವಾರ ಚಿಕಿತ್ಸೆ ನೀಡುತ್ತಿರುವ ಕೊಠಡಿ. ಹುನಗುಂದ ತಾಲ್ಲೂಕು ಆಸ್ಪತ್ರೆಯಲ್ಲಿ ಸೋಮವಾರ ಚಿಕಿತ್ಸೆ ಪಡೆದ ಉಮಾಶ್ರೀ(ಒಳ ಚಿತ್ರ)   

ಬಾಗಲಕೋಟೆ: ಹುನಗುಂದದಲ್ಲಿ ನಡೆದ ಪ್ರತಿಭಟನೆ ವೇಳೆ ಅಸ್ವಸ್ಥರಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಆರೋಗ್ಯ ಚೇತರಿಸಿದೆ. ಪಿತ್ತ ಮತ್ತು ಹೊಟ್ಟೆನೋವಿನ ಸಮಸ್ಯೆ ಇರುವ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಬಾಗಲಕೋಟೆ ‘ನ್ಯೂ ಐಬಿ’ಯಲ್ಲಿ ಮಂಗಳವಾರ ಉಮಾಶ್ರಿ ಅವರಿಗೆ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ರಾಜಕುಮಾರ ಯರಗಲ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಉಮಾಶ್ರಿ ಅವರು ಪಿತ್ತ ಮತ್ತು ‘ಆಸಿಡಿಟಿ’ಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೆ ತೊಂದರೆಯಿಲ್ಲ. ಭಯ ಪಡುವ ಅಗತ್ಯವಿಲ್ಲ. ಅವರಿಗೆ ಎರಡು ದಿನಗಳ ವಿಶ್ರಾಂತಿ ಅಗತ್ಯವಿದೆ. ವಿಶ್ರಾಂತಿ ನಂತರ ಗುಣಮುಖರಾಗುತ್ತಾರೆ ಎಂದು ಜಿಲ್ಲಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಶಿವನಗೌಡ ಪಾಟಿಲ್ ತಿಳಿಸಿದರು.

ADVERTISEMENT

ಅಸ್ವಸ್ಥ: ಹುನಗುಂದದಲ್ಲಿ ಸೋಮವಾರ ನೋಟ್ ಬ್ಯಾನ್ ಖಂಡಿಸಿ ಬ್ಲಾಕ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ಉಮಾಶ್ರಿ ಅವರು ಅಸ್ವಸ್ಥರಾಗಿದ್ದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಕಾಲ್ನಡಿಗೆಯ ಪರಿಣಾಮ ಸುಸ್ತಾಗಿದ್ದರು. ನಿನ್ನೆ ಹುನಗುಂದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ನಿರ್ಭಂಧ
ವಿಶ್ರಾಂತಿಯಲ್ಲಿರುವ ಉಮಾಶ್ರಿ ಅವರನ್ನು ನೋಡುವುದಕ್ಕೆ ಮಾದ್ಯಮ ಸೇರಿದಂತೆ ಏಲ್ಲರಿಗೂ ನಿರ್ಬಂಧ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.