ಮೈಸೂರು: ಬೆಂಗಳೂರು– ಮೈಸೂರು ನಡುವೆ ಸಂಚರಿಸುವ ಕೆಲವು ರೈಲುಗಳ ಮೀಸಲು ಬೋಗಿಗಳನ್ನು ಸಾಮಾನ್ಯ ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ.
ಕೆಲವು ಮೀಸಲು ಬೋಗಿಗಳಲ್ಲಿ ಕೇವಲ ಒಬ್ಬರು, ಇಬ್ಬರು ಮಾತ್ರ ಕಾಯ್ದಿರಿಸಿದ ಟಿಕೆಟ್ ಮೂಲಕ ಪ್ರಯಾಣಿಸುತ್ತಿದ್ದರು. ಅದೇ ಸಾಮಾನ್ಯ ಬೋಗಿಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಈ ಬೋಗಿಗಳ ಟಿಕೆಟ್ ಹೊಂದಿದವರು ಮೀಸಲು ಬೋಗಿಗಳಿಗೆ ಹತ್ತಿದರೆ, ದಂಡ ವಿಧಿಸಲಾಗುತ್ತಿತ್ತು.
ಈ ಸಮಸ್ಯೆ ತಪ್ಪಿಸಲು ಈಗ ಸಾಮಾನ್ಯ ಟಿಕೆಟ್ ಪಡೆದವರು ಕೆಲ ರೈಲುಗಳ ನಿಗದಿತ ಮೀಸಲು ಬೋಗಿಗಳಲ್ಲಿ ಪ್ರಯಾಣ ಮಾಡಲು ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.