ADVERTISEMENT

‘ಜ್ವರ ಬಂದರೆ ಕುಮಾರವ್ಯಾಸ ಭಾರತವನ್ನು ತಲೆಕೆಳಗಿಡುತ್ತಿದ್ದಳು’

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ‘ಕುಮಾರವ್ಯಾಸ ಕಥಾಂತರ’ ಕೃತಿಯನ್ನು ಕೆ.ಸತ್ಯನಾರಾಯಣ ಅವರು ಬಿಡುಗಡೆಗೊಳಿಸಿದರು. ಅ.ರಾ.ಮಿತ್ರ, ಎಂ.ಎಸ್‌.ಆಶಾದೇವಿ ಇದ್ದಾರೆ  ಪ್ರಜಾವಾಣಿ ಚಿತ್ರ
ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ‘ಕುಮಾರವ್ಯಾಸ ಕಥಾಂತರ’ ಕೃತಿಯನ್ನು ಕೆ.ಸತ್ಯನಾರಾಯಣ ಅವರು ಬಿಡುಗಡೆಗೊಳಿಸಿದರು. ಅ.ರಾ.ಮಿತ್ರ, ಎಂ.ಎಸ್‌.ಆಶಾದೇವಿ ಇದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನನಗೆ ಜ್ವರ ಬಂದರೆ ನನ್ನಜ್ಜಿ ನನ್ನ ತಲೆದಿಂಬಿನ ಕೆಳಗೆ ಕುಮಾರವ್ಯಾಸ ಭಾರತದ ಕೃತಿಯನ್ನು ಇಡುತ್ತಿದ್ದಳು..’
ಹೀಗೆಂದವರು ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ.

ನಗರದ ಬಿಎಂಶ್ರೀ ಪ್ರತಿಷ್ಠಾನದ ಭವನದಲ್ಲಿ ಶನಿವಾರ ಆಯೋಜಿಸಿದ್ದ ತಮ್ಮದೇ ಕೃತಿ ‘ಕುಮಾರವ್ಯಾಸ ಕಥಾಂತರ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕುಮಾರವ್ಯಾಸ ಭಾರತ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿತ್ತು. ನನ್ನಜ್ಜ ಮನೆಯಲ್ಲಿ ಕುಮಾರವ್ಯಾಸ ಭಾರತವನ್ನು ಗಟ್ಟಿಯಾಗಿ ಓದುತ್ತಿದ್ದರು. ಅಜ್ಜಿಯಂತೂ ಜ್ವರವನ್ನು ಹೋಗಲಾಡಿಸುವ ಶಕ್ತಿ ಕುಮಾರವ್ಯಾಸ ಭಾರತಕ್ಕಿದೆ ಎಂದೇ ನಂಬಿದ್ದರು’ ಎಂದರು.

ಕೃತಿ ಬಿಡುಗಡೆಗೊಳಿಸಿದ ಲೇಖಕ ಕೆ.ಸತ್ಯನಾರಾಯಣ ಮಾತನಾಡಿ, ‘ಕಥೆಯನ್ನು ನಮ್ಮ ಬದುಕು, ಕಾಲಕ್ಕೆ ಅನ್ವಯ ಮಾಡಿಕೊಳ್ಳುತ್ತೇವೆ. ಹಾಗೆಯೇ ಎಚ್ಚೆಸ್ವಿ ಅವರು ಕುಮಾರವ್ಯಾಸ ಭಾರತದ ಆಂತರ್ಯವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆ ಮೂಲಕ ಹೊಸದನ್ನು ಹೇಳಲು ಪ್ರಯತ್ನಿಸಿದ್ದಾರೆ’ ಎಂದು ಹೇಳಿದರು.

ವಿಮರ್ಶಕಿ ಎಂ.ಎಸ್‌.ಆಶಾದೇವಿ ಮಾತನಾಡಿ, ‘ಅಪ್ಪಟ ಕಾವ್ಯಗಳಿಗೆ ಚಿಕಿತ್ಸಕ ಗುಣ ಇರುತ್ತದೆ. ಅವು ಮತ್ತೆ ಮತ್ತೆ ಹೊಸ ಹುಟ್ಟು ಪಡೆಯುತ್ತವೆ. ಅಂತಹ ಚಿಕಿತ್ಸಕ ಗುಣ ಹೊಂದಿರುವ ಕುಮಾರವ್ಯಾಸ ಭಾರತ ಕೃತಿಯನ್ನು ಎಚ್ಚೆಸ್ವಿ ಅವರು ಮರುನಿರೂಪಣೆ ಮೂಲಕ  ಕಾಲಾನುವಾದ ಮಾಡಿದ್ದಾರೆ’ ಎಂದರು.

ಸಾಹಿತಿ ಅ.ರಾ.ಮಿತ್ರ ಮಾತನಾಡಿ, ‘ಕುಮಾರವ್ಯಾಸ ಪೋಲಿ ಕವಿ. ಆತ ಧರ್ಮರಾಯನ ಕೈಲಿ ಪೋಲಿ ಮಾತುಗಳನ್ನು ಹೇಳಿಸಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.