ADVERTISEMENT

13 ನಿಮಿಷದ ಪ್ರಮಾಣಕ್ಕೆ ₹59 ಲಕ್ಷ

ಹೂವು ಖರೀದಿಗೆ ₹21,000

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 20:25 IST
Last Updated 6 ಜುಲೈ 2018, 20:25 IST
ಎಡ ಚಿತ್ರ 1. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರೊಡನೆ ರಾಜ್ಯಪಾಲ ವಜುಭಾಯಿ ವಾಲಾ. ಬಲ ಚಿತ್ರ 2. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಮಾಣ ಸ್ವೀಕರಿಸುತ್ತಿರುವುದು
ಎಡ ಚಿತ್ರ 1. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರೊಡನೆ ರಾಜ್ಯಪಾಲ ವಜುಭಾಯಿ ವಾಲಾ. ಬಲ ಚಿತ್ರ 2. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಮಾಣ ಸ್ವೀಕರಿಸುತ್ತಿರುವುದು   

ಬೆಂಗಳೂರು: ಒಂದೇ ತಿಂಗಳಲ್ಲಿ ನಡೆದ ಇಬ್ಬರು ಮುಖ್ಯಮಂತ್ರಿಗಳ ತಲಾ ಆರೇಳು ನಿಮಿಷದ ಪ್ರಮಾಣವಚನ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಬರೋಬ್ಬರಿ ₹58,82,940!

ಆರ್‌ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಅವರುಮಾಹಿತಿ ಹಕ್ಕು ಕಾಯ್ದೆ ಅಡಿ ಈ ಬಗ್ಗೆ ವಿವರ ಕೇಳಿದ್ದರು.

ಸರ್ಕಾರ ರಚನೆಗೆ ಬೇಕಾದ ಅಗತ್ಯ ಸ್ಥಾನಗಳು ಇಲ್ಲದಿದ್ದರೂ ಮೇ 17ಕ್ಕೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಅದಕ್ಕಾಗಿ ₹15,93,000 ಖರ್ಚು ಮಾಡಿದರು.

ADVERTISEMENT

ರೈತರ ಮತ್ತು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಅವರ ಕಾರ್ಯಕ್ರಮಕ್ಕೆಕೇಂದ್ರದಿಂದ ಯಾವ ಪ್ರಮುಖರೂ ಬಂದಿರಲಿಲ್ಲ. ರಾಜ್ಯದ ಕೆಲವು ನಾಯಕರು ಮಾತ್ರ ಹಾಜರಿದ್ದರು. ಈ ಸಂದರ್ಭಗಳಿಗೆ ಅತಿಥಿಗಳಿಗೆ ನೀಡಿದ ಹೂಗುಚ್ಛದ ವೆಚ್ಚವೇ ₹21,750!.

ಹೀಗೆ ಖರ್ಚು ಮಾಡುವ ಸ್ಪರ್ಧೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇನು ಹಿಂದೆ ಬಿದ್ದಿಲ್ಲ. ಮೇ 23ರಂದು ನಡೆದ ಪ್ರಮಾಣವಚನ ಸಮಾರಂಭದಲ್ಲಿಎಚ್‌.ಡಿ. ಕುಮಾರಸ್ವಾಮಿಮುಖ್ಯಮಂತ್ರಿಯಾಗಿ ಮತ್ತು ಜಿ. ಪರಮೇಶ್ವರ ಉಪ ಮುಖ್ಯಮಂತ್ರಿ (ಡಿಸಿಎಂ) ಪ್ರಮಾಣವಚನ ಸ್ವೀಕರಿಸಿದರು.ಇದಕ್ಕೆ ಒಟ್ಟು ಖರ್ಚಾಗಿರುವುದು ₹42,89,940.

ಬಿಳಿ ಬಣ್ಣದ ರೇಷ್ಮೆ ಪಂಚೆ ಹಾಗೂ ರೇಷ್ಮೆ ಅಂಗಿಯಲ್ಲಿ ಕಂಗೊಳಿಸಿದ ಕುಮಾರಸ್ವಾಮಿ ಪ್ರಮಾಣವಚನ ನಡೆದಿದ್ದೂ ಏಳೇ ನಿಮಿಷ. ಜಟಾಪಟಿಯ ನಡುವೆಯೇ ಸರ್ಕಾರ ರಚಿಸಿದ ಅವರು ಭವ್ಯವಾಗಿಯೇ ಕಾರ್ಯಕ್ರಮ ಏರ್ಪಡಿಸಿದ್ದರು.

**

₹15,93,000:ಯಡಿಯೂರಪ್ಪ ಮಾಡಿರುವ ಖರ್ಚು

₹42,89,940:ಕುಮಾರಸ್ವಾಮಿ ಮಾಡಿರುವ ಖರ್ಚು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.